ಮೈಸೂರು

ಗಮನ ಸೆಳೆದ ಪ್ರಾಯೋಗಿಕ ವಸ್ತು ಪ್ರದರ್ಶನ

ಮೈಸೂರು ಮಕ್ಕಳ ಕೂಟ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಪ್ರಾಯೋಗಿಕ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ವಸ್ತು ಪ್ರದರ್ಶನವನ್ನು ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ.ದಾಮೋದರ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಲ್ಲಿ ಎಷ್ಟೋ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಹೊರತರುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಮಾದರಿಗಳನ್ನು ಚಿತ್ತಾಕರ್ಷಕವಾಗಿ ರೂಪಿಸುವ ಮೂಲಕ ಹೊರತಂದಿದ್ದಾರೆ ಎಂದು ತಿಳಿಸಿದರು.

ಎಸ್.ಡಿ.ಎಂ.ಮಹಿಳಾಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ವಿ.ಆಶಾ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿ ಭಾರತೀಯ ಸಂಸತ್ ಭವನ, ಮೈಸೂರು ಕೇಂದ್ರ ರೈಲು ನಿಲ್ದಾಣ, ಕರ್ನಾಟಕ ಉಚ್ಛನ್ಯಾಯಾಲಯ, ವಾಣಿಜ್ಯ ಸಂಕೀರ್ಣಗಳು, ಬೃಹತ್ ಮಾಲ್ ಗಳು, ಇನ್ ಫೋಸಿಸ್, ಶ್ವೇತಭವನದ ಮಾದರಿಗಳು ಗಮನ ಸೆಳೆದವು.

Leave a Reply

comments

Related Articles

error: