ಸುದ್ದಿ ಸಂಕ್ಷಿಪ್ತ

ಗುಂಪು ಉದ್ಯಮಶೀಲತೆ: ಸಹಾಯಧನಕ್ಕೆ ಅರ್ಜಿ ಆಹ್ವಾನ

ಮಂಡ್ಯ (ಡಿ.21): 2017-18ನೇ ಸಾಲಿಗೆ ಮಂಡ್ಯ ನಗರಸಭೆಯಲ್ಲಿ ಕೇಂದ್ರ ಪುರಸ್ಕೃತ ದೀನ್ ದಯಾಳ್ ಅಂತ್ಯೋದಯರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ಉಪ ಘಟಕವಾದ ಸ್ವಯಂ ಉದ್ಯೋಗ ಮತ್ತು ಗುಂಪು ಉದ್ಯಮಶೀಲತೆ ಕಾರ್ಯಕ್ರಮದಡಿ ಮಂಡ್ಯ ನಗರದ ಖಾಯಂ ನಿವಾಸಿಯಾಗಿರುವ, ಬಿ.ಪಿ.ಎಲ್‍. ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಬ್ಯಾಂಕ್ ಮೂಲಕ ಸಾಲ ಪಡೆದು ಸ್ವಂತ ಉದ್ಯೋಗ ಕೈಗೊಳ್ಳಲು ಮತ್ತು ಕಿರು ಉದ್ದಿಮೆಗಳನ್ನು ಸ್ಥಾಪಿಸಲು, ಮಹಿಳಾ ಗುಂಪುಗಳಿಗೆ ಗುಂಪು ಚಟುವಟಿಕೆಗೆ ಸಾಲ-ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಮಂಡ್ಯ ನಗರಸಭೆಯಿಂದ ಅರ್ಜಿಗಳನ್ನು ಪಡೆದು, ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಡಿ.30 ಕೊನೆ ದಿನ. ಹೆಚ್ಚಿನ ಮಾಹಿತಿಗೆ ನಗರಸಭೆ ಬಡತನ ನಿರ್ಮೂಲನಾ ಕೋಶವನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: