ದೇಶಪ್ರಮುಖ ಸುದ್ದಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸುಷ್ಮಾ ಸ್ವರಾಜ್

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು, ಏಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಷ್ಮಾ ಅವರು ನ.7ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಬುಧವಾರದಂದು ಸುಷ್ಮಾ ಸ್ವರಾಜ್, ಕಿಡ್ನಿ ವೈಫಲ್ಯದಿಂದ ನಾನು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಪ್ರಸ್ತುತ ನಾನು ಡಯಾಲಿಸಿಸ್‍ ನಲ್ಲಿದ್ದೇನೆ. ಕಿಡ್ನಿ ಕಸಿ ಮಾಡಲು ಪರೀಕ್ಷೆಗಳು ನಡೆಯುತ್ತಿದೆ. ಭಗವಂತ ಕೃಷ್ಣ ನನ್ನನ್ನು ಕಾಪಾಡಲಿ’ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಏಪ್ರಿಲ್‍ನಲ್ಲಿ ಅನಾರೋಗ್ಯದಿಂದ ಏಮ್ಸ್‍ಗೆ ದಾಖಲಾಗಿದ್ದ ಸುಷ್ಮಾ ಅವರು ಜ್ವರ ಮತ್ತು ನ್ಯೂಮೋನಿಯಾ ಲಕ್ಷಣಗಳಿಗೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್‍ ಆಗಿದ್ದರು. ವಿದೇಶಾಂಗ ವ್ಯವವಹಾರಗಳ ಸಚಿವೆ ಆಗಿರುವ ಅವರು ಸಮಸ್ಯೆಯಲ್ಲಿರುವ ಯಾರೇ ಟ್ವೀಟ್ ಮಾಡಿದ್ದರೂ ಅವರಿಗೆ ತಕ್ಷಣ ಸಹಾಯ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ.

whatsapp-image-2016-11-16-at-11-31-21-am

Leave a Reply

comments

Related Articles

error: