ಮೈಸೂರು

ಯೂತ್ ವೈಬ್ ಫೆಸ್ಟ್ : ಪಂಜಾಬಿನಲ್ಲಿ ಎಸ್.ಜೆ.ಸಿ.ಇ ವಿದ್ಯಾರ್ಥಿಗಳ ಸಾಧನೆ

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಂಜಾಬಿನ ಜಲಂದರದಲ್ಲಿರುವ ಲವ್ಲಿ ಪ್ರೊಪೆಷನಲ್ ಯುನಿವರ್ಸಿಟಿಯಲ್ಲಿ ನಡೆದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಉತ್ಸವ ಯೂತ್ ವೈಬ್-2016 ರಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾಲೇಜಿನ 49 ಪ್ರತಿಭಾವಂತ ವಿದ್ಯಾರ್ಥಿಗಳು ನೃತ್ಯ, ನಾಟಕ, ಸಾಹಿತ್ಯ, ಕಲೆ ಹಾಗೂ ವಿಜ್ಞಾನದ ಐವತ್ತಕ್ಕೂ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಎಂಸಿಎ ವಿಭಾಗದ ಪ್ರಾಧ್ಯಾಪಕ ಸಂತೋಷ್ ಶಿವಲಿಂಗಯ್ಯ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿ ಸಂಚಾಲಕ ಮೋನಿಶ್ ಗೌಡ ನೇತೃತ್ವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ನೃತ್ಯ ನಟರಾಜ ಶಾಸ್ತ್ರೀಯ ಸ್ಪರ್ಧೆಯಲ್ಲಿ ಜಾಹ್ನವಿ ಪ್ರಕಾಶ್ ಪ್ರಥಮ, ಸಮೂಹ ನೃತ್ಯ ಪ್ರಥಮ, ಸಮೂಹ ನೃತ್ಯ ಫ್ರೀಸ್ಟೈಲ್ ದ್ವಿತೀಯ, ವಾಯ್ಸ್ ಆಫ್ ಯೂಥ ವೈಬ್ ನಲ್ಲಿ ಅಶ್ವಿನ್ ಪ್ರಭು ದ್ವಿತೀಯ, ಅತ್ಯುತ್ತಮ ಕೀಬೋರ್ಡ್ ವಾದಕ ಸೌರವ್ ದಾಸ್, ಏಕವರ್ಣ ಚಿತ್ರಕಲೆ ತೃಪ್ತಿ.ಕೆ.ಆರ್ ಪ್ರಥಮ, ಆ್ಯಂಟಿಕ್ ವಿಷನ್ ತೃಪ್ತಿ ಕೆ.ಆರ್.ಪ್ರಥಮ, ಕಲಾಕರಿ ಅರುಣ್ ಬಂಗೇರ, ತೃಪ್ತಿ.ಕೆ.ಆರ್.ಪ್ರಥಮ, ಪಾಟ್ ಪೇಂಟಿಂಗ್ ತೃಪ್ತಿ ಕೆ.ಆರ್.ತೃತೀಯ, ರೋಬೊ ವಾರ್ ಶಶಾಂಕ್ ನಂಬಿಯಾರ್ ದ್ವಿತೀಯ, ಮನೋರಂಜನಾ ಕ್ವಿಜ್ ಆಕಾಶ್ ಪ್ರಭು, ಕಾರ್ತಿಕೇಯ, ಶ್ರೀಕರ ರಾಘವನ್ ತೃತೀಯ, ವ್ಯವಹಾರಿಕ ಕ್ವಿಜ್ ಅರವಿಂದ್ ಸಿ, ಕಾರ್ತಿಕೇಯ, ಶ್ರೀಕರ ರಾಘವನ್ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

Leave a Reply

comments

Related Articles

error: