ಮೈಸೂರು

ಚಾರ್ಟೆಡ್ ಅಕೌಂಟೆಂಟ್ ಗಳು ಉದ್ದಿಮೆದಾರರ ಹಾಗೂ ಸರ್ಕಾರಗಳ ನಡುವೆ ಸೇತುವೆ ಇದ್ದಂತೆ : ನಾರಾಯಣಗೌಡ

ಮೈಸೂರು, ಡಿ.21:- ಚಾರ್ಟೆಡ್ ಅಕೌಂಟೆಂಟ್ ಗಳು ಉದ್ದಿಮೆದಾರರ ಹಾಗೂ ಸರ್ಕಾರಗಳ ನಡುವೆ ಸೇತುವೆ ಇದ್ದಂತೆ ಎಂದು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ನಾರಾಯಣಗೌಡ ತಿಳಿಸಿದರು.

ಭವಾನಿ ಅಸೋಸಿಯೇಟ್ಸ್ ನಿಂದ ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಜಿಎಸ್ ಟಿ ಪ್ರಾತ್ಯಕ್ಷಿಕೆ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಯಾವುದೇ ಉದ್ದಿಮೆದಾರರು ಪ್ರತೀ ವರ್ಷ ತಾವು ನಡೆಸುವ ವಹಿವಾಟು ಕುರಿತು ಸರ್ಕಾರಗಳಿಗೆ ಆಡಿಟ್ ವರದಿ ಸಲ್ಲಿಸುವುದು ಕಡ್ಡಾಯ. ಕೆಲವು ಉದ್ದಿಮೆದಾರರು ತಮ್ಮ ವಹಿವಾಟಿಗಷ್ಟೆ ಆದ್ಯತೆ ನೀಡುತ್ತಾರೆಯೇ ವಿನಃ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಆಡಿಟ್ ವರದಿಯ ಬಗ್ಗೆ ಉದಾಸೀನ ಮನೋಭಾವ ತೋರುತ್ತಾರೆ. ಇದು ಒಂದು ರೀತಿಯ ಅಪರಾಧವೂ ಹೌದು. ಈ ಉದಾಸೀನ ಮನೋಭಾವಕ್ಕೆ ಉದ್ದಿಮೆದಾರರಲ್ಲಿ ಆರ್ಥಿಕ ಅನುಭವ ಇಲ್ಲದಿರುವುದೇ ಆಗಿದೆ. ಹಾಗಾಗಿ ಅವರು ಚಾರ್ಟೆಡ್ ಅಕೌಂಟೆಂಟ್ ಗಳನ್ನು ಅವಲಂಬಿಸಬೇಕಾದ ಅನಿವಾರ್ಯ ಇದೆ. ಲೆಕ್ಕ ಪರಿಶೋಧನಾ ವರದಿಯನ್ನು ಸಿದ್ದಪಡಿಸಲು ಹಲವಾರು ಚಾರ್ಟೆಡ್ ಅಕೌಂಟೆಂಟ್ ಗಳು ಕಛೇರಿಗಳನ್ನು ತೆರೆದು ಆಡಿಟ್ ವರದಿಯನ್ನು ಕಳುಹಿಸದಿರುವ ಉದ್ದಿಮೆದಾರರಿಗೆ ವರದಿಯನ್ನು ಸಿದ್ದ ಪಡಿಸಿ ಅವುಗಳನ್ನು ಸರ್ಕಾರಕ್ಕೆ ಸಲ್ಲಿಸುವ ಕರ್ತವ್ಯ ನಿರ್ವಹಿಸುವುದರಿಂದ ಅವರುಗಳನ್ನು ಸರ್ಕಾರ ಮತ್ತು ಉದ್ದಿಮೆದಾರರ ನಡುವೆ ಸೇತುವೆ ಇದ್ದಂತೆ ಎಂದರೇ ತಪ್ಪೇನಿಲ್ಲ. ಇಂದು ಆಯೋಜಿಸಿರುವ ಈ ಕಾರ್ಯಕ್ರಮವು ಉದ್ದಿಮೆದಾರರಿಗೆ ವರದಾನದಂತಿದ್ದು, ಇದರ ಪ್ರಯೋಜನವನ್ನು ಪಡೆಯಬೇಕೆಂದು ಹೇಳಿದರು. ಕೆಲವು ಸಿಹಿ ಹಾಗೂ ಖಾರ ತಿಂಡಿಗಳ ಮೇಲಿನ ತೆರಿಗೆ ಕಡಿಮೆ ಮಾಡಿರುವುದು ಅನೂಕೂಲವಾಗಿದೆ. ವ್ಯಾಪಾರಿಗಳು ಹಾಗೂ ನೌಕರರು ಸರ್ಕಾರಿ ಕಚೇರಿಗಳನ್ನು ನಿಭಾಯಿಸುವುದು ಕಷ್ಟವಾಗಿದೆ. ಇವೆಲ್ಲವನ್ನೂ ನಿಭಾಯಿಸಿಕೊಂಡು ತೆರಿಗೆಯನ್ನು ಕಟ್ಟುತ್ತಿದ್ದೇವೆ. ಕೆಲವು ಪದಾರ್ಥಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು 28 ರಿಂದ 18ಕ್ಕೆ ಇಳಿಸಿರುವುದು ಸ್ವಾಗತಾರ್ಹವೆಂದರು. ಜಿಎಸ್ ಟಿ ಕುರಿತು ಚಾಟೆಂಡ್ ಅಕೌಂಟೆಂಟ್ ಗಳಾದ ಕೆ.ವಿ.ವಿನಯ್ ಹಾಗೂ ಸಿ.ಎ. ಅನ್ನಪೂರ್ಣ ಶ್ರೀಕಾಂತ್ ಅರ್ಜಿ ನಮೂನೆಗಳನ್ನು ತುಂಬುವ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಭವಾನಿ ಅಸೋಸಿಯೇಟ್ಸ್ ಮುಖ್ಯಸ್ಥ ಎನ್. ಶ್ರೀನಿವಾಸ್, ಧರ್ಮಪ್ರಕಾಶ್ ಇನ್ನಿತರ ಉದ್ಯಮಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: