ಪ್ರಮುಖ ಸುದ್ದಿಮೈಸೂರು

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 14ವರ್ಷ ಜೈಲು ಹಾಗೂ 5ಲಕ್ಷ ದಂಡ ವಿಧಿಸಿ ತೀರ್ಪು

ಮೈಸೂರು, ಡಿ.21:-  ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ನೀಡುವ ದಿನವೇ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ  ಕೊನೆಗೂ ಹಾಜರಾಗಿದ್ದು, ನ್ಯಾಯಾಲಯ ಆರೋಪಿಗೆ 14ವರ್ಷ ಜೈಲು ಹಾಗೂ 5ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ವಿದ್ಯಾರಣ್ಯಪುರಂ ನಿವಾಸಿ ಕೆ.ಜಿ ಮಹೇಶ್ ಗೌಡ  ಎಂಬಾತನೇ ಶಿಕ್ಷೆಗೆ ಒಳಗಾದವನಾಗಿದ್ದು, 6ನೇ  ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಪಾಲೆ ಆರೋಪಿಗೆ 14ವರ್ಷ ಜೈಲು ಮತ್ತು 5ಲಕ್ಷರೂ.ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ನ್ಯಾಯವಾದಿ ಶಿವರುದ್ರಪ್ಪ ವಾದ ಮಂಡಿಸಿದ್ದರು.

ಘಟನೆಯ ಹಿನ್ನೆಲೆ: ತೀರ್ಪು ನೀಡುವ ದಿನವೇ ಆರೋಪಿ ನ್ಯಾಯಾಲಯಕ್ಕೆ ಗೈರಾಗುತ್ತಿರುವ ವಿಚಿತ್ರ ಘಟನೆಯೊಂದು ಮೈಸೂರಿನ ನ್ಯಾಯಾಲಯದಲ್ಲಿ ನಡೆದಿತ್ತು. ಮೈಸೂರು ನಗರದ ವಿದ್ಯಾರಣ್ಯಪುರಂ ನಿವಾಸಿ ಕೆ.ಜಿ ಮಹೇಶ್ ಗೌಡ ಎಂಬಾತನೇ ಆರೋಪಿಯಾಗಿದ್ದು, ಈತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಆ ಮಗು ನನ್ನದಲ್ಲ ಎಂದು ವಾದಿಸುತ್ತಿದ್ದ. ನ್ಯಾಯಾಲಯ ಈ ಸಂಬಂಧ ಡಿಎನ್ಎ ಪರೀಕ್ಷೆ ನಡೆಸಲು ಸೂಚಿಸಿ ಮಹೇಶಗೌಡನೇ ಕಾರಣಕರ್ತೃ ಎಂದು ದೃಢಪಡಿಸಿತ್ತು. 6ನೇ  ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ನ್ಯಾಯಾಲಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನವೆಂಬರ್ 23 ರಂದು ತಿಳಿಸಿತ್ತು. ಆದರೆ ಆರೋಪಿ ಅನಾರೋಗ್ಯ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದ. ನಂತರ ನವೆಂಬರ್ 29ರಂದು ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ತಿಳಿಸಿತ್ತು. ಆದರೆ ಅಂದು ಸಹ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಲ್ಲೇ ಉಳಿದಿದ್ದ. ನಂತರ ಪ್ರಕರಣವನ್ನು ಡಿಸೆಂಬರ್ 4ಕ್ಕೆ ಮುಂದೂಡಿತ್ತು. ಅಂದು ಸಹ ನ್ಯಾಯಾಲಯಕ್ಕೆ ಹಾಜರಾಗದೆ ಆಸ್ಪತ್ರೆಯಿಂದ ಪರಾರಿಯಾಗಿದ್ದ. ನ್ಯಾಯಾಲಯ ಡಿಸೆಂಬರ್ 6 ರಂದು ಪ್ರಕರಣದ ತೀರ್ಪು ನೀಡಲು ಆರೋಪಿಯನ್ನು ಕರೆ ತರುವಂತೆ ಸೂಚಿಸಿತ್ತು. ಡಿ.6 ಮತ್ತು  13 ರಂದೂ ಸಹ ಆರೋಪಿ ನ್ಯಾಯಾಲಯಕ್ಕೆ ಗೈರಾಗಿದ್ದು, ಈ ಕಾರಣ ಪ್ರಕರಣದ ತೀರ್ಪನ್ನು ಡಿಸೆಂಬರ್ 16 ಕ್ಕೆ  ಮೂಂದೂಡಲಾಗಿತ್ತು. ಅಂದು ಕೂಡ ಆರೋಪಿ ಗೈರಾಗಿದ್ದ. ಡಿ.20ರಂದು ಕೊನೆಗೂ ಕೋರ್ಟ್ ಗೆ ಹಾಜರಾಗಿದ್ದ ಕೆ.ಜಿ.ಮಹೇಶ್ ಗೌಡನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಡಿ.21ರಂದು ತೀರ್ಪು ನೀಡಿದ ನ್ಯಾಯಾಧೀಶರು 14ವರ್ಷಗಳ ಸೆರೆವಾಸ ವಿಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: