ದೇಶಪ್ರಮುಖ ಸುದ್ದಿ

ಕೆಲವು ರಾಜ್ಯಗಳಲ್ಲಿ ಸೇವೆ ಸ್ಥಗಿತಗೊಳಿಸಲಿದೆ ಏರ್ಸೆಲ್‍!

ನವದೆಹಲಿ (ಡಿ.21): ಟೆಲಿಕಾಂ ಸೇವಾ ಕಂಪನಿ “ಏರ್ಸೆಲ್” ತನ್ನ ಗ್ರಾಹಕರಿಗೆ ಹೊಸ ವರ್ಷದ ಶಾಕ್ ನೀಡಿದೆ. ಕಂಪನಿಯು ಗುಜರಾತ್‍, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಿದೆ.

ಏರ್ಸೆಲ್ ಕಂಪನಿಯು ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ತನ್ನ ಪರವಾನಗಿ ವಾಪಸ್ ಪಡೆದಿದೆ. ಡಿ.2017 ರಂದು ಪರವಾನಿಗೆ ವಾಪಸ್ ಪಡೆದಿದ್ದು, ಇನ್ನು 60 ದಿನಗಳ ಕಾಲ ಮಾತ್ರ ಈ ರಾಜ್ಯಗಳಲ್ಲಿ ಏರ್ಸೆಲ್ ಕಾರ್ಯನಿರ್ವಹಿಸಲಿದೆ. ಇದರ ಪ್ರಕಾರ ಏರ್ಸೆಲ್ ತನ್ನ ಸೇವೆಯನ್ನು 2018ರ ಜನವರಿ 30 ರಂದು ರದ್ದು ಮಾಡಲಿದೆ.

ಈ ಬೆಳವಣಿಗೆ ಬಗ್ಗೆ ನಿಗಾ ವಹಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ-ಟ್ರಾಯ್, ಏರ್ಸೆಲ್ ಸಂಸ್ಥೆಗೆ ಸಲಹೆ ಮಾಡಿದ್ದು ಗ್ರಾಹಕರನ್ನು ಬೇರೊಂದು ಟೆಲಿಕಾಂ ಸೇವಾ ಕಂಪನಿಗೆ ವರ್ಗಾಯಿಸುವಂತೆ, ಅಥವಾ ಗ್ರಾಹಕರು ಪೋರ್ಟ್ ಮಾಡಿಕೊಳ್ಳಲು ಮುಂಚಿತವಾಗಿ ಸೂಚನೆ ನೀಡುವಂತೆ ಸೂಚನೆ ನೀಡಿದೆ.

ಗ್ರಾಹಕರಿಗೆ ನಂಬರ್ ಪೋರ್ಟ್ ಮಾಡಲು ಸಹಾಯ ಮಾಡುವುದಾಗಿ ಏರ್ಸೆಲ್ ಹೇಳಿದೆ. ಏರ್ಸೆಲ್ ಗ್ರಾಹಕರಿಗೆ ಖಾತೆಯ ಬ್ಯಾಲೆನ್ಸ್ ವಾಪಸ್ ಮಾಡಬೇಕಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಏರ್ಸೆಲ್ ಸಂಸ್ಥೆ ಭರವಸೆ ನೀಡಿದೆ.

(ಎನ್‍ಬಿಎನ್‍)

Leave a Reply

comments

Related Articles

error: