
ಮೈಸೂರು
ದೌರ್ಜನ್ಯದ ವಿರುದ್ಧ ಕಾನೂನು ಅರಿವು ಮೂಡಿಸಲು ಪೊಲೀಸ್ ಮಾಹಿತಿ ಕೇಂದ್ರ
ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪೊಲೀಸ್ ಇಲಾಖೆಯು ಮಾಹಿತಿ ಕೇಂದ್ರವನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ದಸರಾ ವಸ್ತುಪ್ರದರ್ಶನ ಸಮಿತಿ ಅಧ್ಯಕ್ಷ ಸಿದ್ದರಾಜು ಅವರು ಉದ್ಘಾಟಿಸಿದರು.
ಈ ಮಾಹಿತಿ ಕೇಂದ್ರವು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿಂತೆ ಹೋರಾಡಲು ಕಾನೂನಿನ ಬಗ್ಗೆ ಅರಿವು ಮೂಡಿಸಲು ಆರಂಭಿಸಲಾಗಿದೆ. ಮಹಿಳೆಯರ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲ ಕಾನೂನುಗಳ ಬಗ್ಗೆ ಮಾಹಿತಿ ನೀಡಲಿದೆ.
ಸಿದ್ದರಾಜು ಅವರು ಮಾತನಾಡಿ, ಪ್ರವಾಸಿಗರಿಗೆ ದಸರಾ ವಸ್ತುಪ್ರದರ್ಶನ ಒಂದು ಪ್ರಮುಖ ಆಕರ್ಷಣೆಯಾಗಿದೆ. ಇದು ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿದೆ. ಜನರು ಪ್ರಮುಖವಾಗಿ ಮನರಂಜನೆಗಾಗಿ ವಸ್ತುಪ್ರದರ್ಶನ ವೀಕ್ಷಿಸಲು ಬರುತ್ತಾರೆ. ಮನರಂಜನೆಯ ಜೊತೆಗೆ ಇಂತಹ ಸ್ಟಾಲ್ಗಳಿಂದ ಮಾಹಿತಿ ಪಡೆಯಬಹುದು. ಮಹಿಳೆಯು ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾದರೂ ಹೇಗೆ ಪಾರಾಗಬಹುದು ಎಂಬ ಬಗ್ಗೆ ಪೊಲೀಸ್ ಇಲಾಖೆ ಆರಂಭಿಸಿರುವ ಮಾಹಿತಿ ಕೇಂದ್ರವು ಕಾನೂನು ಅರಿವು ನೀಡಲಿದೆ. ಈ ಮಾಹಿತಿ ಕೇಂದ್ರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಹು ಉಪಯುಕ್ತವಾಗಿದೆ ಎಂದರು.