ಮೈಸೂರು

ಪ್ರೇತಂಭಟ್ಟರ ನಿಂತಿಲ್ಲರು ಕಾದಂಬರಿ ಲೋಕಾರ್ಪಣೆ

ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆಗಳು, ದಕ್ಷಿಣ ಕನ್ನಡಿಗರ ಸಂಘ, ಮೈಸೂರು ಜಿಲ್ಲಾ ಕಸಾಪ ಇವರ ಸಂಯುಕ್ತ ಆಶ್ರಯದಲ್ಲಿ ಪ್ರೊ.ಕೆ.ಈ ರಾಧಾಕೃಷ್ಣ ಅವರ ಪ್ರೇತಂಭಟ್ಟರ ನಿಂತಿಲ್ಲರು ಕಾದಂಬರಿಯನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.

ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಚಾಲನೆ ನೀಡಿದರು.

ಕೃತಿಯ ಕರ್ತೃ ಪ್ರೊ.ಕೆ.ಈ. ರಾಧಾಕೃಷ್ಣ ಮಾತನಾಡಿ ಅವರು ಓದುವ ಹುಚ್ಚು ಹಿಡಿಸಿದವರು ನಮ್ಮಪ್ಪ. ಪ್ರೇತವನ್ನು ನಾನು ಬೆನ್ನ  ಮೇಲೆ ಕಟ್ಟಿಕೊಂಡೆ. ಬೆಂಗಳೂರಿನ ಪರಮೇಶ್ವರ್ ಅವರು ಕೈ ಹಿಡಿದರು. ಸದಾನಂದಗೌಡರು ಪ್ರೇತ ಚೆನ್ನಾಗಿದೆ ಎಂದು ಮೆಚ್ಚಿದರು. ಸಂಸ್ಕೃತ, ತುಳು, ಕನ್ನಡವೂ ಸೇರಿದಂತೆ ಮೂರರಲ್ಲೂ ಜನಮನ್ನಣೆ ಸಿಕ್ಕಿದೆ. ಈ ಪ್ರೇತದ ಪುಸ್ತಕ ಓದಿ, ನನಗೆ ನನ್ನ ಸ್ನೇಹಿತರು ಕರೆ ಮಾಡಿ ಪ್ರೇತ ಹಿಡಿದಿದೆ ಎಂದರು. ಅಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂದು ಎಲ್ಲರೂ ಪ್ರಶಂಸಿಸಿದ್ದಾರೆ.  ಇದೀಗ ಕರ್ನಾಟಕದ ಎಲ್ಲಾ ಕಡೆ ಇದು ಹೆಸರುವಾಸಿಯಾಗಿದೆ. ಮೈಸೂರಿಗೆ ಬಂದಿದ್ದೇನೆ. ಆದರೆ ಮೈಸೂರು ಮಾತ್ರ ಸುಂದರ ನಗರವಲ್ಲ. ಇದು ಸುಂದರವಾದ ಮನುಷ್ಯರ ನಗರ ಎಂದು ಮೈಸೂರನ್ನು ಹೊಗಳಿದರು. ಇದೇ ವೇಳೆ ತಮ್ಮ ಹಾಗೂ ಶಾಸಕ ವಾಸು ಅವರ ಸ್ನೇಹದ ದಿನಗಳನ್ನು ನೆನೆದು ಭಾವುಕರಾಗುವುದರ ಜೊತೆಗೆ ಕೆಲ ಹಾಸ್ಯದ ನೆನಪುಗಳನ್ನು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಶಾಸಕರಾದ ವಾಸು, ಪದ್ಮಾ ಶ್ರೀನಿವಾಸ್, ವಿಶ್ರಾಂತ ಕುಲಪತಿ ಶೇಕ್ ಅಲಿ, ನಿವೃತ್ತ ಇಂಜಿನಿಯರ್ ಬಾಪು ಸತ್ಯನಾರಾಯಣ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: