ಮೈಸೂರು

ಕುಲಸಚಿವರ ತಪ್ಪಿಲ್ಲದಿದ್ದರೆ ಅವರಿಗೆ ಹುದ್ದೆ ಸಿಗಲಿದೆ : ಬಸವರಾಜ ರಾಯರೆಡ್ಡಿ ಸ್ಪಷ್ಟನೆ

ನಿಯಮಾವಳಿಗಳ ಪ್ರಕಾರ ಕುಲಸಚಿವರ ತಪ್ಪಿಲ್ಲದಿದ್ದರೆ ಅವರಿಗೆ ಹುದ್ದೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಸವರಾಜ ರಾಯರೆಡ್ಡಿ ಅವರನ್ನು ಕಾರ್ಯಕ್ರಮಕ್ಕೂ ಮುನ್ನ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರ ವಜಾ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಎಲ್ಲವೂ ಆಡಳಿತಾತ್ಮಕ ವಿಚಾರವಾಗಿದೆ. ಯುವರಾಜ ಕಾಲೇಜಿನಲ್ಲಿ ಕಾನೂನು ಬಾಹಿರವಾಗಿ ಉಪನ್ಯಾಸಕರುಗಳನ್ನು ನೇಮಕ ಮಾಡಲಾಗಿದೆ. ಆದರೆ ಹೈಕೋರ್ಟ್ ಮೂಲಕ ಅವರು ಸ್ಟೇ ತಂದಿದ್ದಾರೆ. ಮೇಲ್ನೋಟಕ್ಕೆ ಕುಲಸಚಿವರ ತಪ್ಪಿಲ್ಲ ಎಂದು ಕಂಡು ಬಂದಿದೆ. ಅವರ ತಪ್ಪಿಲ್ಲವಾದರೆ ನಿಯಮಾವಳಿ ಪ್ರಕಾರ ಅವರಿಗೆ ಹುದ್ದೆ ಕೊಡೋಣ ಎಂದು ಸ್ಪಷ್ಟಪಡಿಸಿದರು. ಕೆ.ಎಸ್.ಓ ಯೂ ಮಾನ್ಯತೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಇಂದು ದೆಹಲಿಯ ಕಾರ್ಯದರ್ಶಿಗಳು ಅಲ್ಲಿನ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ತಿಂಗಳೊಳಗೆ ನಮಗೆ ಮಾನ್ಯತೆ ಸಿಗುವ ಸಾಧ್ಯತೆಯಿದೆ ಎಂದರು.

Leave a Reply

comments

Related Articles

error: