
ಮೈಸೂರು
ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಐಡಿಯಲ್ ಜಾವಾ ರೋಟರಿ ಶಾಲೆಯ 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಶಾಲೆಯ ಕ್ರೀಡಾಪಟುಗಳಿಗೆ ಕ್ರೀಡಾಜ್ಯೋತಿ ಹಸ್ತಾಂತರಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಶಿವರಾಮೇಗೌಡ ಅವರು ಬುಧವಾರ ಉದ್ಘಾಟಿಸಿದರು. ಶಾಲೆಯ ಅಧ್ಯಕ್ಷರಾದ ಚಿತ್ತರಂಜನ್, ಕಾರ್ಯದರ್ಶಿ ವಾಸುದೇವ ಭಟ್, ಪ್ರಾಂಶುಪಾಲರಾದ ವೀಣಾ, ದೈಹಿಕ ಶಿಕ್ಷಕರಾದ ನಾಗೇಶ್ ಮತ್ತು ಯತೀಶ್ ಉಪಸ್ಥಿತರಿದ್ದರು.