
ಮೈಸೂರು
ಹಾಡುಹಗಲೇ ಮಹಿಳೆಯ ಸರ ಕಸಿದು ಪರಾರಿ
ಮೈಸೂರು, ಡಿ.22:- ಮೈಸೂರಿನಲ್ಲಿ ಮತ್ತೆ ಸರಗಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ. ಹಾಡುಹಗಲೇ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಸಿದ್ದಾರ್ಥ ಬಡಾವಣೆಯಲ್ಲಿ ನಡೆದಿದೆ.
ಕೆ.ಎಸ್.ಆರ್.ಪಿ. ಕಾನ್ಸಟೇಬಲ್ ಪತ್ನಿ ಭುವನೇಶ್ವರಿ ಎಂಬುವರೇ ಸರ 25 ಗ್ರಾಂ ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ. ಸಿದ್ದಾರ್ಥ ಬಡಾವಣೆಯ ಅಹಿಂಸಾ ಮಾರ್ಗದಲ್ಲಿ ಘಟನೆ ನಡೆದಿದ್ದು, ನಜರಬಾದ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಹೆಚ್ಚಿನ ನಿಗಾವಹಿಸಬೇಕೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.(ಕೆ.ಎಸ್,ಎಸ್.ಎಚ್)