ಕರ್ನಾಟಕ

ನಮ್ಮ ಮೆಟ್ರೊ: ಮಾರ್ಚ್ ವೇಳೆಗೆ 6 ಬೋಗಿ ಅಳವಡಿಕೆ, ಮಹಿಳೆಯರಿಗೆ ಪ್ರತ್ಯೇಕ ಬೋಗಿ

ಬೆಂಗಳೂರು (ಡಿ.22): ನಮ್ಮ ಮೆಟ್ರೋ ರೈಲಿನಲ್ಲಿ ಮುಂದಿನ ವರ್ಷದ ಮಾರ್ಚ್ ತಿಂಗಳ ವೇಳೆಗೆ ಮಹಿಳೆಯರಿಗೆ ಪ್ರತ್ಯೇಕ ಭೋಗಿ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಆರ್‍ಸಿಎಲ್‍ ತಿಳಿಸಿದೆ.

ಜನವರಿ ಕೊನೆ ವಾರದಲ್ಲಿ ಮೊದಲ ಮೂರು ಬೋಗಿಗಳು ಸೇರ್ಪಡೆಯಾಗಲಿದ್ದು, ಅದರಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಹೆಚ್ಚುವರಿ ಬೋಗಿಗಳು ಜನವರಿಗೆ ದೊರೆತರೂ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಬೇಕಾಗಿರುವುದರಿಂದ ಕನಿಷ್ಠ ಎರಡು ತಿಂಗಳು ಜಾರಿಗೆ ತರಲು ಸಾಧ್ಯವಾಗುವುದಲ್ಲ. ಮಾರ್ಚ್ ವೇಳೆಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಮಾಡಬಹುದು ಎಂದು ಹೇಳಲಾಗಿದೆ.

ಮೆಟ್ರೊದಲ್ಲಿರುವ ಸದ್ಯದ 3 ಬೋಗಿಗಳನ್ನು 6 ಬೋಗಿಗಳಿಗೆ ಹೆಚ್ಚಿಸುವ ಸಲುವಾಗಿ ಹೊಸ ಬೋಗಿಗಳ ನಿರ್ಮಾಣಕ್ಕಾಗಿ ಬಿಇಎಂಎಲ್‍ಗೆ ಗುತ್ತಿಗೆ ವಹಿಸಲಾಗಿದೆ. ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಗುರುವಾರ ಬಿಇಎಂಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಬಿಇಎಂಎಲ್ ಅಧಿಕಾರಿಗಳು ಬೋಗಿ ಪೂರೈಕೆ ಬಗ್ಗೆ ಖಚಿತಪಡಿಸಿದ್ದಾರೆ.

ಜನವರಿ ಅಂತ್ಯದ ವೇಳೆಗೆ 6 ಬೋಗಿಯ ಒಂದು ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದೆ. 6 ಬೋಗಿಯ ರೈಲು ಸೇವೆ ಪ್ರಾರಂಭವಾದರೆ ಒಂದು ಬೋಗಿಯಲ್ಲಿ ಒಟ್ಟು 1, 576ರಿಂದ 2,004 ಜನ ಪ್ರಯಾಣಿಸಬಹುದು.

2018ರ ಜನವರಿ ಕೊನೆ ವಾರದಲ್ಲಿ ಹೊಸದಾಗಿ ಮೂರು ಬೋಗಿಗಳು ದೊರೆತರೂ ಇದನ್ನು ರೈಲಿಗೆ ಅಳವಡಿಸಲು ಸಾಧ್ಯವಿಲ್ಲ. ಮೊದಲ ಎರಡು ತಿಂಗಳು ಈ ಬೋಗಿಗಳನ್ನು ಪರೀಕ್ಷಿಸಲಾಗುತ್ತದೆ.ಪರೀಕ್ಷೆಯಲ್ಲಿ ಬೋಗಿ ಉತ್ತಮವಾಗಿದೆ ಎಂದು ದೃಢಪಟ್ಟರೆ ಮಾತ್ರ ರೈಲಿಗೆ ಅಳವಡಿಸಲಾಗುತ್ತದೆ. ಅಂದರೆ ಆರು ಬೋಗಿ ರೈಲು ಬರಲು ಮಾರ್ಚ್‍ವರೆಗೆ ಕಾಯಬೇಕಾಗುತ್ತದೆ.

 

(ಎನ್‍ಬಿಎನ್‍)

Leave a Reply

comments

Related Articles

error: