ಪ್ರಮುಖ ಸುದ್ದಿಮೈಸೂರು

ನೋಟು ಚಲಾವಣೆ ನಿಷೇಧದಿಂದ ಬಡವರಿಗೆ ತೊಂದರೆ: ಕಾಳಪ್ಪ

ದೇಶದ ಖ್ಯಾತನಾಮರು ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರು. ನೋಟುಗಳ ಚಲಾವಣೆ ನಿಷೇಧ ಮಾಡಿರುವ ಬಗ್ಗೆ ಟ್ವೀಟ್ ಮಾಡುತ್ತಾ ಹಾಡಿ ಹೊಗುಳುತ್ತಿದ್ದರೆ, ಇತ್ತ ಬಡವರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜನಾರ್ದನ ರೆಡ್ಡಿ 500 ಕೋಟಿ ರು. ಖರ್ಚು ಮಾಡಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡುವ ಧೈರ್ಯ ಈ ಸರಕಾರಕ್ಕಿಲ್ಲ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು.

ಬುಧವಾರದಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಸದಸ್ಯರಿಗೆ ನೋಟು ನಿಷೇಧವಾಗುವ ಬಗ್ಗೆ ಮಾಹಿತಿ ಇತ್ತು. ಕಳೆದ ಮೂರು ತಿಂಗಳಿನಿಂದ ಜಾಸ್ತಿ ಹಣ ಡೆಪಾಸಿಟ್‍ ಆಗಿರುವುದು ಆಶ್ಚರ್ಯವೇನಲ್ಲ. ಆರ್‍ಬಿಐ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ‘ಹೊಸ ನೋಟು ಪ್ರಿಂಟ್‍ ಆಗುತ್ತಿದ್ದ ಬಗ್ಗೆ ನನಗೆ ಮಾಹಿತಿ ಇತ್ತು’ ಎಂದು ನ.10ರಂದೇ ಎಲ್ಲರ ಸಮ್ಮುಖದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‍ ಅನ್ನು ಗುರಿಯಾಗಿಸಿ ಈ ನೋಟು ನಿಷೇಧ ಪ್ರಕ್ರಿಯೆ ನಡೆದಿದೆ. ಮೋದಿ ಅವರು ತಂದಿರುವ ಈ ಯೋಜನೆಯು ಮಧ್ಯಮವರ್ತಿಗಳಿಗೆ ಮಾರ್ತ ಲಾಭ ತಂದಿದೆ ಎಂದರು.

ಜನಾರ್ದನ ರೆಡ್ಡಿ ಮಗಳ ಮದುವೆಗೆ ತೆರಳಿರುವ ಕಾಂಗ್ರೆಸ್ ಮುಖಂಡರ ಬಗ್ಗೆ ಪ್ರತಿಕ್ರಿಯಿಸಿದ ಕಾಳಪ್ಪ, ‘ಮದವೆಗೆ ಹೋಗದಂತೆ ನಾವು ಯಾರನ್ನೂ ತಡೆಯಲಾಗುವುದಿಲ್ಲ. ಇದು ಅವರ ವೈಯಕ್ತಿಕ ನಿರ್ಧಾರ ಎಂದು ಅಭಿಪ್ರಾಯಪಟ್ಟರು.

ತನ್ವೀರ್‍ ಸೇಠ್ ವಿವಾದದ ಬಗ್ಗೆ ಮಾತನಾಡಿ, ನಾನು ವರದಿಯನ್ನು ನೋಡಿದ್ದೇನೆ. ಅವರು ಕೇವಲ ಫೋಟೋ ಸ್ಕ್ರಾಲ್‍ ಮಾಡುತ್ತಿದ್ದರು ಅಷ್ಟೇ. ನನಗೂ ಈ ರೀತಿಯ ಫೋಟೋ ಕಳುಹಿಸುವ ಹಳೆಯ ಸ್ನೇಹಿತರಿದ್ದಾರೆ ಎಂದು ಹೇಳಿದರು.

Leave a Reply

comments

Related Articles

error: