ಮೈಸೂರು

ಕೆರೆಗೆ ನೀರು ಹರಿಸಿ: ತಪಿತಸ್ಥ ಅಧಿಕಾರಿಗಳನ್ನು ವರ್ಗಾಯಿಸಿ

ನಂಜನಗೂಡು ತಾಲೂಕು ಹಳೇಪುರ ಗ್ರಾಮದ ಕರೆಗೆ ಪ್ರಸಕ್ತ ಸಾಲಿನಲ್ಲಿ ನೀರು ಹರಿಸದೇ ಈ ಭಾಗದ ರೈತರು ಬೆಳೆದ ಬೆಳೆಯೆಲ್ಲ ಒಣಗುತ್ತಿದೆ. ಆದ್ದರಿಂದ, ಅಧಿಕಾರಿಗಳು ತಕ್ಷಣವೇ ಕೆರೆಗೆ ನೀರು ತುಂಬಬೇಕು ಎಂದು ಹಳೇಪುರ ಕೆರೆ ಹೋರಾಟ ಸಮಿತಿ ಸಂಚಾಲಕ ಪಿ.ಎಸ್.ರಾಜಶೇಖರಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಅವರು, 2015-16ನೇ ಸಾಲಿನಲ್ಲಿ ಕೆರೆಗೆ ನೀರು ಹರಿಸಿದ್ದರಿಂದ ಆ ವರ್ಷ ರೈತರು ಸಮೃದ್ಧ ಬೆಳೆಯನ್ನು ಬೆಳೆದಿದ್ದರು.  ನೀರಾವರಿ ಅಧಿಕಾರಿಗಳು ಈ ವರ್ಷ ಜೂನ್ ಜುಲೈನಲ್ಲಿ  ನೆಪಮಾತ್ರಕ್ಕೆ ಕೆರೆಗೆ ನೀರು ಹರಿಸಿದ್ದು ಕೇವಲ ಇಪ್ಪತ್ತು ದಿನಗಳಲ್ಲಿಯೇ ಖಾಲಿಯಾಗಿ ರೈತರಿಗೆ ಅನ್ಯಾಯವಾಗಿದೆ. ವರ್ಷಕ್ಕೊಮ್ಮೆ ಕೆರೆಗೆ ನೀರು ತುಂಬಬೇಕು ಎನ್ನುವ ಸರ್ಕಾರಿ ಆದೇಶವನ್ನು ಸಂಬಂಧಿಸಿದ ಅಧಿಕಾರಿಗಳು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿದ್ದಾರೆ. ಹೂಳು ತುಂಬಿದ ಕೆರೆಯನ್ನು ಸ್ವcfCಗೊಳಿಸಿ, ಕೆರೆಗೆ ನೀರು ತುಂಬಬೇಕು. ಅಲ್ಲದೆ,  ನಿರ್ಲಕ್ಷ್ಯತೋರಿದ ನೀರಾವರಿ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಶೀಘ್ರ ಕ್ರಮ ಕೈಗೊಂಡು ಮುಂದಿನ ಐದು ದಿನಗಳಲ್ಲಿಯೇ ಕೆರೆಗೆ ನೀರು ತುಂಬಬೇಕು ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಚನ್ನಬಸಪ್ಪ, ಮಹದೇವಪ್ಪ, ಪುಟ್ಟಸ್ವಾಮಿ ಶೆಟ್ಟಿ ಹಾಗೂ ಹೆಚ್.ಎಸ್.ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: