ಕ್ರೀಡೆ

ಶ್ರೀಲಂಕಾ ವಿರುದ್ಧ ವೇಗದ ಶತಕ ಬಾರಿಸಿ ಮತ್ತೆರಡು ದಾಖಲೆ ನಿರ್ಮಿಸಿದ ರೋಹಿತ್

ಇಂದೋರ್(ಡಿ.22): ಶ್ರೀಲಂಕಾ ವಿರುದ್ಧ ಇಂದು ನಡೆದ ಏಕದಿನ ಪಂದ್ಯದಲ್ಲಿ ಅತಿ ವೇಗದ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್’ಮನ್ ಡೇವಿಡ್ ಮಿಲರ್ ಅವರ ಹೆಸರಿನಲ್ಲಿದ್ದ ದಾಖಲೆಗೆ ಸಮನಾಗಿದ್ದಾರೆ.

35 ಎಸೆತಗಳ ಶತಕದಲ್ಲಿ 10 ಭರ್ಜರಿ ಸಿಕ್ಸ್’ರ್’ಗಳು ಹಾಗೂ 12 ಬೌಂಡರಿಗಳು ಒಳಗೊಂಡಿದ್ದವು. ರೋಹಿತ್ ಅವರ ಶತಕ ಟಿ20ಯಲ್ಲಿ 2ನೇ ಶತಕವಾಗಿದೆ. ಟಿ20ಯಲ್ಲಿ ಇಲ್ಲಿಯವರೆಗೂ ಗೇಲ್ ಮಾತ್ರ 2 ಶತಕ ದಾಖಲಿಸಿದ್ದರು. ಈಗ ಅವರ ದಾಖಲೆಗೂ ಸಮನಾಗಿದೆ.

ಕೆ.ಎಲ್. ರಾಹುಲ್ ಜೊತೆಗೆ ಮೊಲದ ವಿಕೆಟ್ ಜೊತೆಯಾಟಕ್ಕೆ 76 ಎಸೆತಗಳಲ್ಲಿ 165 ರನ್ ಪೇರಿಸಿದರು. 3 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆಯಲ್ಲಿರುವ ಭಾರತ 2ನೇ ಪಂದ್ಯದಲ್ಲಿ 20 ಓವರ್’ಗಳಲ್ಲಿ 260 ರನ್ ದಾಖಲಿಸಿ 261 ರನ್ ಬೃಹತ್ ಸವಾಲಿನ ಗುರಿ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 3ನೇ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: