
ಮೈಸೂರು
ಸಚಿವ ತನ್ವೀರ್ ಸೇಠ್ ಅವರನ್ನು ವಜಾಗೊಳಿಸಿ
ಕಳಂಕಿತ ರಾಜಕಾರಣಿಯಿಂದ ಮೈಸೂರು ಜಿಲ್ಲೆಯು ತಲೆತಗ್ಗಿಸುವಂತಾಗಿದೆ ಎಂದು ಪರೋಕ್ಷವಾಗಿ ಸಚಿವ ತನ್ವೀರ್ ಸೇಠ್ ವಿರುದ್ಧ ಎನ್.ಆರ್.ಕ್ಷೇತ್ರದ ಬಿಜೆಪಿ ಘಟಕ ಅನಿಲ್ ಥಾಮಸ್ ವಾಗ್ದಾಳಿ ನಡೆಸಿ ಈ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಮುಖ್ಯಮಂತ್ರಿಗಳಿಗೆ ಸಚಿವ ತನ್ವೀರ್ ಸೇಠ್ ಅವರನ್ನು ವಜಾಗೊಳಿಸಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಅವರು, ಬುಧವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಇಸ್ಲಾಂ ಧರ್ಮದಲ್ಲಿ ಮಹಿಳೆಯರನ್ನು ಅತಿ ಗೌರವದಿಂದ ನೋಡುತ್ತಿದ್ದು ಕೆಟ್ಟ ದೃಷ್ಠಿ ಬೀಳದಿರಲಿ ಎಂದು ಬುರ್ಖಾ ಹಾಕಿಸುವರು. ಆ ಸಮಾಜದವರೇ ಆದ ಸಚಿವ ತನ್ವೀರ್ ಸೇಠ್ ನಡುವಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರವೇ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿಯೇ ಅಶ್ಲೀಲ ಚಿತ್ರ ವೀಕ್ಷಿಸಿ ವೇದಿಕೆಗೆ ಅಗೌರವ ತೋರಿರುವುದು ಖಂಡನೀಯ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿರುವವರು ಅತಿ ಜಾಗರೂಕರಾಗಿರಬೇಕು. ವೇದಿಕೆಯ ಮೇಲೆಯೇ ಅಶ್ಲೀಲ ಚಿತ್ರ ವೀಕ್ಷಿಸಿದ ಸಚಿವರನ್ನು ವಜಾಗೊಳಿಸದೆ ಅವರಿಗೆ ಶ್ರೀರಕ್ಷೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯವೈಖರಿಯೂ ಸರಿಯಿಲ್ಲ. ಸಚಿವರನ್ನು ತಕ್ಷಣವೇ ವಜಾಗೊಳಿಸಬೇಕು ಇಲ್ಲವಾದಲ್ಲಿ ರಾಜೀನಾಮೆ ನೀಡುವವರೆಗೂ ಬಿಜೆಪಿಯೂ ರಾಜ್ಯಾದ್ಯಾಂತ ಜಿಲ್ಲಾ ಘಟಕಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಮಹಿಳಾ ಮೋರ್ಚಾದ ನೀಲಿಫರ್ ಸನಾ ಹಾಗೂ ಇತರರು ಉಪಸ್ಥಿತರಿದ್ದರು.