ಕರ್ನಾಟಕಮೈಸೂರು

ಕಾವೇರಿ ದಳ್ಳುರಿ: ಸೆ.9 ರಂದು ಪ್ರಧಾನಿ ಭೇಟಿ ಮಾಡಿ ಪರಿಸ್ಥಿತಿ ವಿವರಿಸಲಿರುವ ಮಾಜಿ ಪ್ರಧಾನಿ

ಕಾವೇರಿ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಮಾಜಿ ಪ್ರಧಾನಿ ಎಚ್‍.ಡಿ. ದೇವೇಗೌಡ ಅವರ ಬೇಡಿಕೆಗೆ ಪ್ರಧಾನಿ ಕಾರ್ಯಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದೇ ಸೆಪ್ಟೆಂಬರ್ 9 ರಂದು ಸಂಜೆ 7 ಗಂಟೆಗೆ ಸಮಯ ನಿಗದಿ ಮಾಡಿ ಅವಕಾಶ ಕಲ್ಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕಾವೇರಿ ವಿವಾದ ಮತ್ತು ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‍ ನೀಡಿರುವ ತೀರ್ಪಿನ ಕುರಿತು ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ವೇಳೆ ಕರ್ನಾಟದಲ್ಲಿ ಸದ್ಯೋಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಕೊರತೆಯ ಬಗ್ಗೆ ದೇವೇಗೌಡರು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಕಾವೇರಿ ಕಣಿವೆಯ ಕರ್ನಾಟಕದ ರೈತರ ಬೆಳೆಗಳಿಗೆ ನಾವು ನೀರು ಬಳಸುತ್ತಿಲ್ಲ. ಆದರೆ ತಮಿಳುನಾಡು ತನ್ನ ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ಇದು ನೈತಿಕವಾದ ಬೇಡಿಕೆ ಅಲ್ಲ. ಮಾತ್ರವಲ್ಲದೆ ರಾಜ್ಯದಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಅಗತ್ಯ ಪೂರೈಸುವಷ್ಟು ನೀರು ಸಂಗ್ರಹವಾಗದಿದ್ದರೆ ದೇಶದ ಐಟಿ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ ಮುಂತಾದ ಕಾವೇರಿ ಕೊ‍ಳ್ಳದ ನಗರಗಳು ಜಲಕ್ಷಾಮದಿಂದ ತತ್ತರಿಸಬಹುದು ಎಂಬ ವಿಷಯವನ್ನೂ ದೇವೇಗೌಡರು ಪ್ರಧಾನಿ ಮೋದಿಯವರ ಗಮನಕ್ಕೆ ತರಲಿದ್ದಾರೆ ಎಂದು ಎಚ್‍ಡಿಕೆ ತಿಳಿಸಿದರು.

Leave a Reply

comments

Related Articles

error: