ಮೈಸೂರು

ಕನಕದಾಸರ ಕೃತಿ, ಕೀರ್ತನೆಗಳ ಚೌರ್ಯ: ಆರೋಪ

ಕನಕದಾಸರ ಕೃತಿಗಳನ್ನು ಹಾಗೂ ಕೀರ್ತನೆಗಳನ್ನು ಚೌರ್ಯ ಮಾಡಲಾಗುತ್ತಿದೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಹಂ.ಲಕ್ಕೇಗೌಡ ಆರೋಪಿಸಿದರು.

300px-kanakadasa_artಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಂದರ ದಾಸರ ಕೃತಿಗಳಿಗೆ ಸಿಗುತ್ತಿರುವ ಮಾನ್ಯತೆ ಅವರ ಸಮಕಾಲೀನರಾದ ಕನಕದಾಸರ ಕೃತಿಗಳಿಗೆ ದೊರೆಯುತ್ತಿಲ್ಲ. ಮನೆಮಾತಾಗಿರುವ ಜನಪ್ರಿಯ ತಿರುಕನ ಕನಸು ಪದ್ಯವನ್ನು ಮುಪ್ಪಿನ ಷಡಕ್ಷರಿಯವರು ಬರೆದಿದ್ದಾರೆ ಎಂದು ನಮೂದಿಸಲಾಗಿದೆ. ಜಾತಿಯ ಕಾರಣದಿಂದಾಗಿ ಬರೆದ ಕವಿಯನ್ನೇ ಮರೆಮಾಚುವ ವಂಚಕ ಮನಸ್ಸುಗಳು ಸಮಾಜದಲ್ಲಿ ರಾರಾಜಿಸುತ್ತವೆ ಎಂದು ಲೇವಡಿ ಮಾಡಿ 1965ರಲ್ಲಿ ಕನಕದಾಸರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾತ್ಮ ಕನಕದಾಸರ ಪ್ರಶಸ್ತಿ ಕೃತಿಯನ್ನು ಹೊರತಂದಿತ್ತು. ಪುಸ್ತಕದಲ್ಲಿ ಕನಕದಾಸರ ಕೀರ್ತನೆಗಳು, ಪವಾಡಗಳು, ಸಮಗ್ರ ಸಾಹಿತ್ಯ, ಸಂಗೀತಗಳು ಒಳಗೊಂಡಿವೆ.  ಐವತ್ತು ವರ್ಷದ ಹಿಂದೆ ಪ್ರಕಟಿಸಿದ್ದ ತಿರುಕನ ಕನಸು ನಾಗರಹಾವೆ ಹಾವೊಳು ಹೂವೇ ಕೃತಿಗಳನ್ನು ಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ಇಂತಹ ಕೃತ್ಯಗಳು ನಡೆದಿದ್ದು ಕನಕ ಅಭಿವೃದ್ಧಿ ಪ್ರಾಧಿಕಾರ ಹಾಗು ಪ್ರದೇಶ ಕುರುಬರ ಸಂಘಗಳೇ ಉತ್ತರನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಎಚ್.ರಮೇಶ್. ಡಾ.ಮಾರೇಗೌಡ, ಚಿಕ್ಕೇಗೌಡ, ಬಿರೇಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: