ಮೈಸೂರು

ಎಸ್ ಡಿ ಎಂ ಐ ಎಂ ಡಿ ಸಂಸ್ಥೆಯ ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ

ಮೈಸೂರು,ಡಿ.23:- ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಪಾಠ ಪ್ರವಚನ ಕಲಿಯುವುದರ ಜೊತೆಗೆ, ಇತರ ದೇಶಗಳ ಬಗ್ಗೆ, ಅಲ್ಲಿನ ವ್ಯವಹಾರ ನಿರ್ವಹಣಾ ಅಭ್ಯಾಸಗಳ ಬಗ್ಗೆ ಅರಿಯಲು ಉತ್ತಮ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತವೆ. ತಮಗೆ ದೊರೆತ ಅನುಭವಗಳಿಂದ ವಿದ್ಯಾರ್ಥಿಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸನ್ನದ್ಧರಾಗುತ್ತಾರೆ. ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿಯಲ್ಲಿ, ಎಸ್ ಡಿ ಎಂ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯು ತಮ್ಮ ಪಿ ಜಿ ಡಿ ಎಂ ವಿದ್ಯಾರ್ಥಿಗಳನ್ನು ಕಳೆದ ಹತ್ತು ವರ್ಷಗಳಿಂದ ಕಲಿಸುತ್ತಾ ಬಂದಿದ್ದಾರೆ. ಮೇಯ್ಸ್ ಸ್ಕೂಲ್ ಆಫ್ ಬಿಸಿನೆಸ್, ಟೆಕ್ಸಾಸ್ ಎ ಅಂಡ್ ಎಂ ಯುನಿವರ್ಸಿಟಿ, ಯು ಎಸ್ ಎ, ಈ ವಿಶ್ವವಿದ್ಯಾನಿಲಯದೊಂದಿಗೆ ಪ್ರಾರಂಭವಾದ ಈ ವಿನಿಮಯ ಕಾರ್ಯಕ್ರಮವು, ಇಂದು ವಿಸ್ತಾರಗೊಂಡಿದೆ. ಈಗ ಗ್ಲೋಬಲ್ ಮ್ಯಾನೇಜ್ಮೆಂಟ್ ಎಜುಕೇಷನ್ ಇನ್ಸ್ಟಿಟ್ಯೂಟ್, ಶಾಂಘೈ ಯುನಿವರ್ಸಿಟಿ, ಚೈನಾ, ಬ್ರಿಟಿಷ್ ಯುನಿವರ್ಸಿಟಿ ಇನ್ ದುಬೈ, ಯುನಿವರ್ಸಿಟಿ ಆಫ್ ದುಬೈ, ಯುನಿವರ್ಸಿಟಿ ಆಫ್ ಬೋರ್ಡೊ, ಯುನಿವರ್ಸಿಟಿ ಆಫ್ ಪಾವ್, ಫ್ರಾನ್ಸ್, ಯುನಿವರ್ಸಿಟಿ ಆಫ್ ಮಾಂಟೆವಿಡಿಯೋ, ಉರುಗ್ವೆ, ಮತ್ತು ಹೀಲ್ಬ್ರೋನ್ ಯುನಿವರ್ಸಿಟಿ, ಜರ್ಮನಿ – ಈ ವಿಶ್ವವಿದ್ಯಾನಿಲಯಗಳೊಂದಿಗೆ ವಿದ್ಯಾರ್ಥಿ ವಿನಿಮಯ ನಡೆಯುತ್ತಿದೆ.

ಪಿ ಜಿ ಡಿ ಎಂ ಗೆ ದೊರೆತ ಎ ಸಿ ಬಿ ಎಸ್ ಪಿ, ಯು ಎಸ್ ಎ ಮತ್ತು ಈ ಎಫ್ ಎಂ ಡಿ, ಯುರೋಪ್ – ಗಳಿಂದ ದೊರೆತ ಅಂತರರಾಷ್ಟ್ರೀಯ ಮಾನ್ಯತೆಗಳಿಂದ, ಎಸ್ ಡಿ ಎಂ ಐ ಎಂ ಡಿ ಸಂಸ್ಥೆಯು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಹೆಚ್ಚಿಸಿದ್ದು, ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪ್ರತಿವರ್ಷ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಅವಧಿಯನ್ನು (ಟರ್ಮ್) ಅಲ್ಲಿ ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಳ್ಳಬಹುದು. ವಿನಿಮಯ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆ, ಶಿಕ್ಷಣೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಸಂದರ್ಶನ, ಅರ್ಹತಾ ಪರೀಕ್ಷೆಯಲ್ಲಿ ಸಾಧನೆ- ಈ ರೀತಿ ಅನೇಕ ವಿಧಾನಗಳಿಂದ ಆಯ್ಕೆ ಮಾಡಲಾಗುತ್ತದೆ.  ಈ ರೀತಿಯ ವಿನಿಮಯ ಕಾರ್ಯಕ್ರಮಗಳಲ್ಲಿ ಆತಿಥೇಯ ವಿಶ್ವವಿದ್ಯಾನಿಲಯಗಳು ಶಿಕ್ಷಣ ಶುಲ್ಕವನ್ನು ವಿದ್ಯಾರ್ಥಿಗಳಿಂದ ತೆಗೆದುಕೊಳ್ಳುವುದಿಲ್ಲ. ಆದರೆ ಪ್ರಯಾಣ, ವಸತಿ ಹಾಗೂ ಇತರ ಖರ್ಚುಗಳನ್ನು ಭರಿಸಬೇಕಾಗುತ್ತದೆ. ಎಸ್ ಡಿ ಎಂ ಐ ಎಂ ಡಿ ಸಂಸ್ಥೆಯು  ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಒದಗಿಸಿಕೊಡುತ್ತದೆ ಹಾಗೂ ಅವಶ್ಯಕವಾದ ಮಾರ್ಗದರ್ಶನವನ್ನು ನೀಡುತ್ತದೆ.

2018 ರ ವರ್ಷದಲ್ಲಿ,  15 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಜನವರಿ 2018 ರಿಂದ  ಟೆಕ್ಸಾಸ್  ಎ ಅಂಡ್ ಎಂ ಯುನಿವರ್ಸಿಟಿ, ಯು ಎಸ್ ಎ :  ಮಯೂರ್ ಜಿ. ರಾಜ್, ಯೋಗಿತಾ ಭಟ್,ರಿಜು ಮಿತ್ತಲ್,  ಚಂದನ ಎಸ್ ಯುನಿವರ್ಸಿಟಿ ಆಫ್ ಬೋರ್ಡೊಫ್ರಾನ್ಸ್ :  ಕಾವೇರಮ್ಮ ಕೆ ಯು, ಸ್ವಾತಿ ಪ್ರಸಾದ್, ವಿವೇಕ್ ಆರಾಧ್ಯ ಎಸ್. ಯು., ವರ್ಷಾ ಭೀಮಯ್ಯ  ಯುನಿವರ್ಸಿಟಿ ಆಫ್ ಪಾವ್, ಫ್ರಾನ್ಸ್ : ಅನೀಷಾ ರೊನಿತ ರಾಜ್, ನವನೀತ್ ಬಲ್ಲಾಳ್ ಎನ್, ನಯನತಾರ ಡೊರೊತಿ ಡಿಸೋಜ, ನಿತಿನ್ ಈ  ಹೀಲ್ಬ್ರೋನ್ ಯುನಿವರ್ಸಿಟಿ, ಜರ್ಮನಿ : ರಾಮಕೃಷ್ಣ ಪಾಟೀಲ್, ಸಮೀಕ್ಷಾ ಪಟೇಲ್, ಮೋನಿಷಾ ಕೆ. ಎಂ. ಈ ಸ್ಥಳಗಳಿಗೆ ಹೊರಡುತ್ತಿದ್ದಾರೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: