ಮನರಂಜನೆಮೈಸೂರು

ಗಾಂಧಿಗೆ ಸಾವಿಲ್ಲ – ನವ್ಯ ಕನ್ಯೆಯರು ನಾಟಕ ಪ್ರದರ್ಶನ

ಬೆಂಗಳೂರು ಥಿಯೇಟರ್ ಆನ್ಸಂಬಲ್ ತಂಡವು ರಂಗಾಯಣದಲ್ಲಿ ಎರಡು ದಿನಗಳ ಕಾಲ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದೆ ಎಂದು ನಿರ್ದೇಶಕ ಅಭಿಮನ್ಯು ಭೂಪತಿ ಬುಧವಾರ ತಿಳಿಸಿದರು.

scan0023ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ರಂಗಾಯಣದ ವನರಂಗದಲ್ಲಿ ನ.18 ಮತ್ತು 19ರಂದು ಸಂಜೆ 7ಗಂಟೆಗೆ ನಾಟಕ ಪ್ರದರ್ಶಿಸಲಾಗುತ್ತಿದ್ದು. ನ.18ರಂದು ‘ಗಾಂಧಿಗೆ ಸಾವಿಲ್ಲ’ ಎನ್ನುವ ಸಾಮಾಜಿಕ ವಿಡಂಬನಾತ್ಮಕ ಕಾಲ್ಪನಿಕ ಕಥಾವಸ್ತುವನ್ನಾಧರಿಸಿ ಹೆಣೆದಿರುವ ನಾಟಕವಾಗಿದ್ದು. ಗೋಡ್ಸೆ ಗುಂಡೇಟಿನಿಂದ ಮರಣವನ್ನಪ್ಪದೆ ಗಾಂಧೀಜಿಯವರು ಬದುಕಿದ್ದರೆ ಗೋಡ್ಸೆ ಹಾಗೂ ಗಾಂಧೀಜಿಯವರ ಮಧ್ಯೆ ನಡುವೆ ನಡೆಯುವ ಹಿಂದುತ್ವ, ಸ್ವರಾಜ್ಯ, ಅಸ್ಪೃಷ್ಯತೆ ಸೇರಿದಂತೆ ಹಲವಾರು ಸೈದ್ದಾಂತಿಕ ವಿರೋಧಾಭಾಸದ ನಡುವೆ ಕಥೆಯು ಸಾಗುವುದು ಎಂದರು.

ನ.19ರಂದು ನವ್ಯ ಕನ್ಯೆಯರು’ ಎನ್ನುವ ಹಾಸ್ಯಪ್ರಧಾನ ನಾಟಕವನ್ನು ಪ್ರದರ್ಶಿಸುತ್ತಿದ್ದು ಒಂದು ಗಂಟೆ ಕಾಲಾವಧಿಯಲ್ಲಿ ನಡೆಯುವ ನಾಟಕವು ಪ್ರೇಕ್ಷಕರಿಗೆ ಸಂಪೂರ್ಣ ಹಾಸ್ಯರಸದೌತಣ ನೀಡುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜೀವನ್ ಗಂಗಾಧರ್ ಉಪಸ್ಥಿತರಿದ್ದರು.

Leave a Reply

comments

Related Articles

error: