ಸುದ್ದಿ ಸಂಕ್ಷಿಪ್ತ
ನಾಳೆ ರಾಜ್ಯಮಟ್ಟದ ದೊಣ್ಣೆ ವರಸೆ ಪಂದ್ಯಾವಳಿ
ಮೈಸೂರು, ಡಿ. 23 : ಕರ್ನಾಟಕ ಸ್ಪೋರ್ಟ್ಸ್ ಸಿಲಬಂ ಅಸೋಸಿಯೇಷನ್ ವತಿಯಿಂದ ಮೂರನೇ ರಾಜ್ಯಮಟ್ಟದ ದೊಣ್ಣೆ ವರಸೆ ಮತ್ತು ಸ್ಟಿಕ್ ಫೈಟಿಂಗ್ ಪಂದ್ಯಾವಳಿಯನ್ನು ಡಿ.24ರ ಬೆಳಗ್ಗೆ 11 ಗಂಟೆಗೆ ವಿನಾಯಕ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮರಿಯಪ್ಪ, ಅಸೋಸಿಯೇಷನ್ ಅಧ್ಯಕ್ಷ ಎನ್.ಎ.ಮಾದವ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)