ಸುದ್ದಿ ಸಂಕ್ಷಿಪ್ತ
ಡಿ.24-25ಕ್ಕೆ ವಿಶ್ವ ಗಣಿತ ತಜ್ಞರ ಚಿತ್ರಕಲಾ ಪ್ರದರ್ಶನ
ಮೈಸೂರು, ಡಿ. 23 : ಹಿರಿಯ ನಾಗರೀಕರ ಹಗಲು ಕ್ಷೇಮ ಕೇಂದ್ರದ ವತಿಯಿಂದ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ‘ವಿಶ್ವ ಗಣಿತ ತಜ್ಞರ ಚಿತ್ರಕಲಾ ಪ್ರದರ್ಶನವನ್ನು’ ಡಿ.24 ಮತ್ತು 25ರಂದು ಬೆಳಗ್ಗೆ 10.30 ರಿಂದ ಸಂಜೆ 7ರವರೆಗೆ ವಿವೇಕಾನಂದ ನಗರದ ಬ್ರಹ್ಮಶ್ರೀನಾರಾಯಣ ಯೋಗಮಂದಿರದಲ್ಲಿ ಆಯೋಜಸಿದೆ.
ಗ್ರೀನ್ ಸಂಸ್ಥೆ ಅಧ್ಯಕ್ಷ ಪ್ರಭುಸ್ವಾಮಿ ಚಾಲನೆ ನೀಡುವರು, ಡಾ.ಜಮುನಾರಾಣಿ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಮುತ್ತುಸ್ವಾಮಿ, ಯು.ಜಿ.ಮೋಹನ್ ಕುಮಾರ್ ಆರಾದ್ಯ ಭಾಗವಹಿಸುವರು. (ಕೆ.ಎಂ.ಆರ್)