ಕರ್ನಾಟಕಪ್ರಮುಖ ಸುದ್ದಿ

ಷಷ್ಠಿ ಪೂರ್ತಿ ನೆರವೇರಿಸಿಕೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ

ರಾಜ್ಯ(ಹಾಸನ)ಡಿ.24:-  ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತೆ ಮದುವೆಯಾಗುವುದರ ಮೂಲಕ ಸುದ್ದಿಯಾಗಿದ್ದಾರೆ.

ಇಂದು ಹಾಸನದಲ್ಲಿ ಜ್ಞಾನಕ್ಷಿ ಕನ್‍ವೆನ್ಶನ್ ಸೆಂಟರ್‍ನಲ್ಲಿ ನಡೆದ ಅದ್ಧೂರಿ ಮದುವೆಗೆ ಸ್ವತಃ ರೇವಣ್ಣನವರ ತಂದೆ, ಮಾಜಿ ಪ್ರಧಾನಿಯಾದ ಹೆಚ್.ಡಿ ದೇವೇಗೌಡರು ಹಾಗೂ ತಾಯಿ ಚನ್ನಮ್ಮ ಸಾಕ್ಷಿಯಾದರು. ಹೆಚ್.ಡಿ ರೇವಣ್ಣ ಮತ್ತೆ ಮದುವೆಯಾಗಿದ್ದಾರೆ ಎಂಬ ಸುದ್ದಿ ತಿಳಿದು ಶಾಕ್ ಆದ್ರಾ..?  ಹಾಗೇನು ಇಲ್ಲ.  ರೇವಣ್ಣ ಅವರು ಮೊನ್ನೆಯಷ್ಟೇ 60ರ ವಸಂತಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಷಷ್ಠಿಪೂರ್ತಿ ಹಿನ್ನೆಲೆಯಲ್ಲಿ ಇಂದು ರೇವಣ್ಣ ಮತ್ತೊಮ್ಮೆ ಭವಾನಿ ರೇವಣ್ಣನವರಿಗೆ ತಾಳಿ ಕಟ್ಟುವುದರ ಮೂಲಕ ಸಂಭ್ರಮ ಹಂಚಿಕೊಂಡರು. ದಂಪತಿಗೆ ಆದಿಚುಂಚನಗಿರಿಮಠದ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ಮಾಡಿದರು. ತಂದೆ-ತಾಯಿಯ ಈ ಸುಂದರ ಕ್ಷಣಕ್ಕೆ ಮಕ್ಕಳಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಸಾಕ್ಷಿಯಾದರು. ಇವರಷ್ಟೇ ಅಲ್ಲದೇ ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸಿ ಶುಭಕೋರಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: