ಮೈಸೂರು

10ನೇ ತರಗತಿಯ ಮಕ್ಕಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು : ಎಸ್ ಎ ರಾಮದಾಸ್

ಮೈಸೂರು,ಡಿ.24:- ಮಾಜಿ ವೈದ್ಯಕೀಯ ಶಿಕ್ಷಣ  ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎ ರಾಮದಾಸ್ ರವರು  ಸಂಜೀವಿನಿ ಫೌಂಡೇಶನ್  ವತಿಯಿಂದ ಹತ್ತನೇ ತರಗತಿ ಮಕ್ಕಳಿಗಾಗಿ  ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ  ಕಾರ್ಯಾಗಾರವನ್ನು ಉದ್ಘಾಟಿಸಿದರು.

ಉದ್ಘಾಟನೆ  ನೆರವೇರಿಸಿ ಬಳಿಕ ಮಾತನಾಡಿದ ಅವರು    2011  /12  /13 ನೇ ಸಾಲಿನಲ್ಲಿ  ವಿಶೇಷ ತರಬೇತಿಗಳನ್ನು ಕೊಟ್ಟಂತಹ ಕಾರಣಗಳಿಂದ ಮೈಸೂರು ರಾಜ್ಯದಲ್ಲೇ  5  ನೇ ಸ್ಥಾನಕ್ಕೆ ಬಂದಿದ್ದು ಸಂತೋಷದ ವಿಷಯ ಆದರೆ ತದನಂತರ ರಾಜ್ಯದಲ್ಲಿ 10  ನೇ ತರಗತಿಯ ಫಲಿತಾಂಶದಲ್ಲಿ ಕಡಿಮೆಯಾಗಿರುವುದು ಶೋಚನೀಯ. ಮತ್ತೊಮ್ಮೆ ಮೈಸೂರು ಜಿಲ್ಲೆ 10  ನೇ ತರಗತಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲನೇ ಸ್ಥಾನಕ್ಕೆ ಬರುವಂತೆ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ.  ಹಾಗಾಗಿ 10ನೇ ತರಗತಿಯ ಮಕ್ಕಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು, ಮೊಬೈಲ್, ಇಂಟರ್ನೆಟ್ ನಲ್ಲಿಗೆ ಕಾಲ ಕಳೆಯುವುದನ್ನು ನಿಲ್ಲಿಸಬೇಕು. ಇನ್ನು 89  ದಿನಗಳ ಕಾಲ ನಿರಂತರ ಶ್ರಮದಿಂದ  ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿ ಇವತ್ತಿನಿಂದಲೇ ಅಭ್ಯಾಸ ಪ್ರಾರಂಭಿಸಬೇಕು. ಸಂಜೀವಿನಿ ಫೌಂಡೇಶನ್ ವತಿಯಿಂದ 10  ನೇ ತರಗತಿ ಮಕ್ಕಳಿಗಾಗಿಯೇ  ಪರೀಕ್ಷಾ ಪೂರ್ವ ಸಿದ್ದತಾ ತರಬೇತಿಯನ್ನು ಪ್ರತಿ ಭಾನುವಾರ ನಡೆಸಿಕೊಡುತ್ತಿರುವುದನ್ನು ಎಲ್ಲರೂ ಸದುಪಯೋಗ ಪಡೆಯಬೇಕು. ಎಲ್ಲ ಮಕ್ಕಳು ದೇಶದ ಆಸ್ತಿಯಾಗುವ ಸ್ಥಾನದಲ್ಲಿ ಇರುವುದರಿಂದ ನಿಮ್ಮೆಲ್ಲರ ಭವಿಷ್ಯದೊಂದಿಗೆ ದೇಶದ ಭವಿಷ್ಯ ರೂಪಗೊಳ್ಳಲಿ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: