ಮೈಸೂರು

ಕಡಿಮೆಬೆಲೆಯಲ್ಲಿ ಜನೌಷಧಿಕೇಂದ್ರದಲ್ಲಿ ಸಿಗುವ ಔಷಧದ ಸದುಪಯೋಗ ಪಡೆಯಲು ಎಸ್.ಎ.ರಾಮದಾಸ್ ಸಲಹೆ

ಮೈಸೂರು,ಡಿ.24:- ನಗರದ ಸಿದ್ದಾರ್ಥ ಲೇ ಔಟ್ ನ ವಿನಯ್ ಮಾರ್ಗ 9   ನೇ  ಕ್ರಾಸ್ ನಲ್ಲಿ ಮತ್ತು ಸಯ್ಯಾಜಿ ರಾವ್ ರಸ್ತೆಯ ಮೈಸೂರು ಡೈಯಾಗ್ನೋಸ್ಟಿಕ್  ಸೆಂಟರ್ ಇರುವ ಮಳಿಗೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಜನೌಷಧಿ ಪರಿಯೋಜನೆಯ    ದೇಶದ 3013  ನೇ  ಹಾಗೂ 3014  ನೇ ಕರ್ನಾಟಕದ 216 ನೇ ಮೈಸೂರಿನ 18  ನೇ  ಭಾರತೀಯ ಜನೌಷಧ ಕೇಂದ್ರ ವನ್ನು ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎ ರಾಮದಾಸ್ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದ 2  ನೇ ಜೆನೆರಿಕ್ ಮೆಡಿಕಲ್ ಸ್ಟೋರ್ ನ್ನು ಕೆ ಆರ್ ಆಸ್ಪತ್ರೆಯ ಆವರಣದಲ್ಲಿ ಜಾವಗಲ್ ಶ್ರೀನಾಥ್ ರವರಿಂದ ಉದ್ಘಾಟಿಸಿದ್ದನ್ನು ನೆನೆದು ಅಂದು ಎದುರಾದ ಮೆಡಿಕಲ್ ಲಾಭಿಯ ಬಗ್ಗೆ ವಿವರಿಸಿದರು. ಗುಣಾತ್ಮಕವಾಗಿರುವ ಔಷಧಿಯನ್ನು ಅತಿ ಕಡಿಮೆಬೆಲೆಯಲ್ಲಿ ಸಿಗುವ ಕೇಂದ್ರವಾದ ಜನೌಷಧಿಕೇಂದ್ರದಲ್ಲಿ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು . ದೇಶದಲ್ಲೇ ಅತಿ ಹೆಚ್ಚು ಕೇಂದ್ರ ಗಳನ್ನು ಪ್ರಾರಂಭಿಸುವ ಮೂಲಕ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿ ಇದೆ. ಗುಜರಾತ್ ಎರಡನೇ ಸ್ಥಾನ, ಕೇರಳ 3  ನೇ ಸ್ಥಾನ ಹಾಗೂ ಕರ್ನಾಟಕ 4  ನೇ ಸ್ಥಾನದಲ್ಲಿ ಇರುತ್ತದೆ. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲು ಮುಂದೆ ಬರಬೇಕೆಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: