ಕರ್ನಾಟಕ

ಸಿಮೆಂಟು ತುಂಬಿದ ಲಾರಿ ಟ್ರಾನ್ಸಫಾರ್ಮರ್ ಗೆ ಡಿಕ್ಕಿ

ರಾಜ್ಯ(ಮಡಿಕೇರಿ)ಡಿ.25:- ಸಿಮೆಂಟು ತುಂಬಿದ ಲಾರಿ 63 ಕೆ.ವಿ. ವಿದ್ಯುತ್ ಟ್ರಾನ್ಸಫಾರ್ಮರ್ ಗೆ ಡಿಕ್ಕಿ ಹೊಡೆದ ಘಟನೆ ಸಮೀಪದ ಕಾಗಡಿಕಟ್ಟೆ ತಿರುವಿನಲ್ಲಿ ಭಾನುವಾರ ಬೆಳಗ್ಗಿನ ಜಾವ 4-30 ಸುಮಾರಿಗೆ ಸಂಭವಿಸಿದೆ.

ಹಾಸನ ಕಡೆಯಿಂದ ಸೋಮವಾರಪೇಟೆ ಪಟ್ಟಣದ ಪ್ಲಾಂಟೇಶನ್ ಸಪ್ಲೈ ಏಜೆನ್ಸಿಗೆ ಸಾಗಿಸುತ್ತಿದ್ದ ಸಿಮೆಂಟ್ ಲಾರಿ ಅಪಘಾತಕ್ಕೀಡಾಗಿದೆ. ಚಾಲಕ ಅರಕಲಗೂಡು ಅಂಜನ್ ಪ್ರಾಣಪಾಯದಿಂದ ಪಾರಾಗಿದ್ದಾರೆ.  ಲಾರಿ ಡಿಕ್ಕಿಯಾದ ರಭಸಕ್ಕೆ ಟ್ರಾನ್ಸ್‍ಫಾರ್ಮರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅವಘಡದ ಹಿಂದಿನ ದಿನ, ಟ್ರಾನ್ಸಫಾರ್ಮರ್‍ಗೆ ಪಟ್ಟಣದ ವಿದ್ಯುತ್ ಪ್ರಸರಣ ನಿಗಮದಲ್ಲಿ ಬ್ರೇಕರ್ ಹಾಕಿರುವುದರಿಂದ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಸೆಸ್ಕ್ ಸಿಬ್ಬಂದಿಗಳು ಹೇಳಿದರು. ಲಾರಿ ಡಿಕ್ಕಿಯಾದ ತಕ್ಷಣ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚಾಲಕನು ಕೂಗಿಕೊಂಡಿದ್ದರಿಂದ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ, ಚಾಲಕನನ್ನು ಲಾರಿಯಿಂದ ಇಳಿಸಿದ್ದಾರೆ. ಕಾಗಡಿಕಟ್ಟೆ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಸ್ಥಳವಾಕಾಶ ಕಲ್ಪಿಸಲು ಮುಂದಾದ ಸಂದರ್ಭ, ಲಾರಿ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಡಿಕ್ಕಿಯಾಯಿತು ಎಂದು ಚಾಲಕ ಹೇಳಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: