
ಕರ್ನಾಟಕ
ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ
ರಾಜ್ಯ(ಮಡಿಕೇರಿ)ಡಿ.25:- ಡಿ.4ರಂದು ಕೋವರ್ಕೊಲ್ಲಿ ಸಮೀಪದ ನಗರೂರು ಎಸ್ಟೇಟ್ನಲ್ಲಿ ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಬಿಡುಗಡೆಗೊಂಡಿದ್ದು, ಅರಣ್ಯಾಧಿಕಾರಿಗಳು ಮೃತರ ಪತ್ನಿ ಗುಲಾಬಿ ಅವರಿಗೆ ಆದೇಶ ಪತ್ರ ವಿತರಿಸಿದರು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ವರದಿಯ ಮೇರೆ ಸರ್ಕಾರದಿಂದ ರೂ. 2ಲಕ್ಷ ಪರಿಹಾರ ಮೊತ್ತ ಬಿಡುಗಡೆಯಾಗಿದ್ದು, ಉಪ ವಲಯ ಅರಣ್ಯಾಧಿಕಾರಿ ಮಾಧವ ನಾಯಕ್ ಅವರು ಆದೇಶ ಪ್ರತಿ ವಿತರಿಸಿದರು.
ಈ ಸಂದರ್ಭ ತಾ.ಪಂ. ಸದಸ್ಯ ಸತೀಶ್, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ಸೇರಿದಂತೆ ಇಲಾಖಾ ಸಿಬ್ಬಂದಿಗಳು ಇದ್ದರು. (ಕೆಸಿಐ,ಎಸ್.ಎಚ್)