ಮೈಸೂರು

ಬೆಮ್ಮತ್ತಿ ಗ್ರಾಮದಲ್ಲಿ ಖಾತೆಯಾಗಿ ಮಾರ್ಪಟ್ಟ ಎಂಟುನೂರು ಎಕರೆ ಭೂಮಿ: ರೈತರಿಗೆ ಅನ್ಯಾಯ

ಪಿರಿಯಾಪಟ್ಟಣ ತಾಲೂಕು ಬೆಮ್ಮತ್ತಿ  ಗ್ರಾಮದ ರೈತರು ಪೂರ್ವಜರ ಕಾಲದಿಂದಲೂ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಏಕಾಏಕಿ ಇನ್ನೊಬ್ಬರ ಹೆಸರಿಗೆ ಖಾತೆಯಾಗಿ ಬದಲಾವಣೆಯಾಗಿದ್ದು ಇದರಿಂದ ಗ್ರಾಮದ 45 ಕುಟುಂಬಗಳು ಸಂತ್ರಸ್ಥಗೊಂಡಿವೆ. ಸಂಬಂಧಿಸಿದ ಅಧಿಕಾರಿಗಳಿಂದಲೂ ನ್ಯಾಯ ದೊರೆಯುತ್ತಿಲ್ಲ ಎಂದು ಸಂತ್ರಸ್ಥ ಕುಟುಂಬದ ಸದಸ್ಯರು ದೂರಿದರು.

ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಅನಕ್ಷರಸ್ಥರಾದ ನಾವು ನಮ್ಮ ತಾತನ ಕಾಲದಿಂದಲೂ ಗ್ರಾಮದ ಸುಮಾರು ಎಂಟುನೂರು ಎಕರೆ ಭೂಮಿಯಲ್ಲಿ ಹಲವಾರು ಕುಟುಂಬಗಳು ವ್ಯವಸಾಯ ನಡೆಸುತ್ತಿವೆ. ಭೂಮಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಪಟ್ಟಭದ್ರರು ದಾಖಲೆಗಳನ್ನು ರೂಪಿಸಿಕೊಂಡು ಏಕಾಏಕಿ ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದರಿಂದ ಗ್ರಾಮದ ಹಲವಾರು ಕುಟುಂಬಗಳು ಬೀದಿಗೆ ಬೀಳಲಿವೆ. ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಉಚಿತ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ. ಇತ್ತೀಚೆಗೆ, ರೌಡಿ ಅವ್ವ ಮಾದೇಶ ಹಾಗೂ ಅವರ ಕಡೆಯ ಗೂಂಡಾಗಳಿಂದ ರೈತರ ಮೇಲೆ ಹಲ್ಲೆ ಯತ್ನವೂ ನಡೆದಿದೆ. ಜೀವ ಭಯದಿಂದ ದಿನದೂಡುವಂತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಬೇಕೆಂದು ರೈತ ಬೈರೇಗೌಡ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೆಂಕಟೇಶ್, ಬೈರಯ್ಯ, ಲೋಕಗೌಡ, ಭೈರೇಗೌಡ, ಚಂದ್ರಯ್ಯ, ತಿಮ್ಮಮ್ಮ ಹಾಗೂ ಇತರೇ ಸಂತ್ರಸ್ಥ ರೈತರು ಪತ್ರಿಕಾ ಭವನದಲ್ಲಿ ಉಪಸ್ಥಿತರಿದ್ದು ತಮ್ಮ ಅಳಲನ್ನು ತೊಡಿಕೊಂಡರು.

Leave a Reply

comments

Related Articles

error: