ಮೈಸೂರು

ಎಸ್ ಜೆ ಸಿ ಇ 2017 ನೇ ವರ್ಷದ ಜಾಗತಿಕ ಹಳೆಯ ವಿದ್ಯಾರ್ಥಿಗಳ ವಾರ್ಷಿಕ ಕೂಟ

ಮೈಸೂರು,ಡಿ.25:- ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ (ಎಸ್ ಜೆ ಸಿ ಇ) 2017 ನೇ ವರ್ಷದ ಜಾಗತಿಕ ಹಳೆಯ ವಿದ್ಯಾರ್ಥಿಗಳ ವಾರ್ಷಿಕ ಕೂಟವನ್ನು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಪೀಠ, ಮೈಸೂರು ಇಲ್ಲಿನ ಟೆಡ್ ನ ಸಲಹೆಗಾರ ಧನಂಜಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾಗಿನ ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡರು. ಎಸ್ ಜೆ ಸಿ ಇ ಕ್ಯಾಂಪಸ್ ನ  ಇಂದಿನ ಉತ್ತಮ ಸ್ಥಿತಿಗೆ ಅನೇಕ ಗಣ್ಯರು ಕಾರಣೀಭೂತರಾಗಿದ್ದಾರೆ ಹಾಗೂ ಅಂತಹ ಸಂಸ್ಥೆಯೊಂದಿಗೆ ತಾವು ಸಂಬಂಧ ಹೊಂದಿರುವುದು ತಮ್ಮ ಸೌಭಾಗ್ಯ. ಈ ಸಂಸ್ಥೆಯು ಕಳೆದ 54 ವರ್ಷಗಳಲ್ಲಿ  ಮಹಾ ಸಾಧನೆಯನ್ನು ಮಾಡಿದೆ ಆದರೆ ಮುಂದೆ ಇನ್ನೂ ಉತ್ತಮವಾದ ಸಂಸ್ಥೆಯಾಗುವ ನಿಟ್ಟಿನಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ, ಈ ವಿಷಯದಲ್ಲಿ  ವರ್ಷದಿಂದ ವರ್ಷಕ್ಕೆ ಉತ್ತಮ ಮಾರ್ಗದರ್ಶನದಡಿಯಲ್ಲಿ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಕೊಡುಗೆಯೂ ಸೇರಿ ಅದನ್ನು ಮುನ್ನಡೆಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಎಂಟು ಜನ ಹಳೆಯ ವಿದ್ಯಾರ್ಥಿಗಳಾದ ಫೊರ್ಸ್ ಹೆಲ್ತ್ (ಪೈ) ಲಿ. ನ ಅಧ್ಯಕ್ಷರು ಹಾಗೂ ಸಿ ಇ ಓ ಆಗಿರುವ ಡಾ. ಶ್ಯಾಂ ವಾಸುದೇವ ರಾವ್, ಆಕ್ಸೆಂಚರ್ ಇಂಡಿಯಾದ ಮಾನೇಜಿಂಗ್ ಡೈರೆಕ್ಟರ್ ನಿರಂಜನ್ ಬಾಬು, ಸಿಂಗಪೂರ್ ನ ಎಸ್ಟಾರ್ ನಲ್ಲಿ ವಿಜ್ಞಾನಿಯಾಗಿರುವ ಡಾ. ಕೆ. ಎನ್ ಭಾನುಪ್ರಕಾಶ್, ಕಳಿಸು ಫೌಂಡೇಶನ್ ನ ನಿರ್ದೇಶಕ ನಿಖಿಲೇಶ್,  ಹಾಬ್ಬಿ ಪ್ಲೇಸ್, ಮೈಸೂರು, ಇದರ ಸಂಸ್ಥಾಪಕಿ ಸವಿತ ರಂಗ ಹಾಗೂ ಕನ್ನಡ ಚಲನಚಿತ್ರೋದ್ಯಮದ ನಟ-ನಟಿಯರಾದ ಮಿ. ರಿಷಿ, ಮಿಸ್ ರೋಶನಿ ಮತ್ತು ಮಿಸ್ ಶೃತಿ ನಂದೀಶ್ ಆವರುಗಳನ್ನು ಸನ್ಮಾನಿಸಲಾಯಿತು.

ಗೌರವಾನ್ವಿತ ಅತಿಥಿಗಳಾಅಗಿ ಆಗಮಿಸಿದ್ದ  ಜೆ.ಎಸ್.ಎಸ್. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಬಿ ಜಿ ಸಂಗಮೇಶ್ವರರವರು  ಮಿ. ನವೀನ್ ಚಂದ್ರ ವಿರಚಿತ ಪುಸ್ತಕ  ’ಕ್ಯಾಂಪಸ್ ಟು ಕಾರ್ಪೊರೇಟ್’’ ನ್ನು ಲೋಕಾರ್ಪಣೆಗೊಳಿಸಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಲಭ್ಯವಿರುವ ಪ್ರಖ್ಯಾತ ಕಂಪನಿಗಳಲ್ಲಿ ವೃತ್ತಿ ಮಾಡಲು ವೃತ್ತಿ ನಿಯೋಜನೆ ಆಯ್ಕೆ ಹಾಗೂ ಅಲ್ಲಿನ ವೃತ್ತಿ ಜೀವನದ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಅಲ್ಲದೇ ಕಾಲೇಜಿನ ವಿದ್ಯಾರ್ಥಿಗಳಾದ ವಿ. ವರ್ಶದ್ ಮತ್ತು ಮಧುಮಿತ ಇವರಿಗೆ ಜೆ ಎಸ್ ಎಸ್  ಎಸ್ ಅಂಡ್ ಟಿಯು ನ ರಿಜಿಸ್ಟ್ರಾರ್ ಡಾ. ಕೆ. ಲೋಕೇಶ್ ಪ್ರೋತ್ಸಾಹ ಪುರಸ್ಕಾರ(ಸ್ಕಾಲರ್ಶಿಪ್) ನೀಡಿದರು ಮತ್ತು ಇನ್ಫರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಯನ್ನು ನೀಡಲಾಯಿತು.

ಎಸ್ ಜೆ ಸಿ ಇ ಅಲುಮ್ನಿ ಅಸೋಸಿಯೇಶನ್ ನ ಉಪಾಧ್ಯಕ್ಷ ಡಿ. ಸುಧನ್ವ ಸ್ವಾಗತಿಸಿದರು.  ಅಲುಮ್ನಿ ಅಸೋಸಿಯೇಶನ್ ನ ಕಾರ್ಯದರ್ಶಿ ಎಮ್. ಡಿ ಹರಿನಾಥ್,ಸಂಚಾಲಕ ಡ. ಬಿ ಎಸ್ ಹರೀಶ್ ಮತ್ತು ಇತರರು ಉಪಸ್ಥಿತರಿದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: