ಮೈಸೂರು

ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮ ದಿನಾಚರಣೆ : ಗರ್ಭಿಣಿಯರಿಗೆ ಹಣ್ಣು ಹಂಪಲು ವಿತರಿಸಿದ ಬಿಜೆಪಿ ಯುವಮೋರ್ಚಾ

ಮೈಸೂರು,ಡಿ.25:- ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾ ವತಿಯಿಂದ ನಂಜನಗೂಡಿನ ಸರಕಾರಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಮಾಡುವ ಮೂಲಕ ವಿಶೇಷವಾಗಿ ಭಾರತದ ಹೆಮ್ಮೆಯ ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ, ಪೌರಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ವಿತರಿಸಲಾಯಿತು,ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭಿಣಿ ಸಹೋದರಿಯರಿಗೆ ಹಣ್ಣು ಹಂಪಲು ವಿತರಿಸಿ ಅವರ ಆರೋಗ್ಯ ಕುಶಲೋಪರಿಯನ್ನು ವಿಚಾರಿಸುವುದರೊಂದಿಗೆ ಧೈರ್ಯ ತುಂಬಲಾಯಿತು. ತದನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಕಳೆದ ದಿನಗಳಲ್ಲಿ ಅಧಿಕಾರದ ಮದದಲ್ಲಿ ದೇಶವನ್ನೇ ಮರೆತು ತಮ್ಮ ಜೋಳಿಗೆ ತುಂಬಿಸಿಕೊಳ್ಳುತ್ತಿದ್ದ ಇಂದಿರಾಗಾಂಧಿಯವರ ಆಡಳಿತ, ವಾಜಪೇಯಿ ಯವರ ಅಧಿಕಾರವಧಿಯಲ್ಲಾದಂತಹ ಅಭಿವೃದ್ಧಿಗಳನ್ನು ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಇಂದಿರಾಗಾಂಧಿಯವರ ಕಾಲದಲ್ಲಿ ಒಮ್ಮೆ ಪಾರ್ಲಿಮೆಂಟ್ ನಲ್ಲಿ ಬಿ.ಜೆ.ಪಿ ಯವರು ಇಬ್ಬರೇ ಇದ್ದೀರಿ ಎಂದು ವಾಜಪೇಯಿ ಅವರನ್ನು ಅಣುಕಿಸಿದ್ದರು. ಅದೇ ಸಂದರ್ಭದಲ್ಲಿ ವಾಜಪೇಯಿಯವರು ಮುಂದೊಂದು ದಿನ ಇಡೀ ದೇಶವೇ ಬಿಜೆಪಿಮಯವಾಗುತ್ತದೆ,ಆ ಸಂದರ್ಭದಲ್ಲಿ ದೇಶದ ಜನ ನಿಮ್ಮ ಪರಿಸ್ಥಿತಿ ನೋಡಿ ನಗುತ್ತಾರೆ ಎಂದಿದ್ದರು. ಆ ಮಾತು ಇಂದು ಸುಳ್ಳಾಗಲಿಲ್ಲ,ನಿಮ್ಮ ಆ ದುರಹಂಕಾರದ ಮಾತೇ ನಿಮಗೆ ಶಾಪವಾಗಿದೆ.  ಭಾರತೀಯ ಜನತಾ ಪಾರ್ಟಿಯ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದೊಂದಿಗೆ ಮತ್ತು ಅಭಿವೃದ್ಧಿಗಳೊಂದಿಗೆ 19 ರಾಜ್ಯಗಳಲ್ಲಿ ಕಮಲ ಅರಳಿ ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಟೀಕಿಸಿದರು.

ವಾಜಪೇಯಿ ಅವರು ದೇಶದ ಪ್ರಧಾನಮಂತ್ರಿಗಳಾಗಿ ದೇಶವೇ ಹೆಮ್ಮೆ ಪಡುವಂತಹ ಜನ ಸೇವೆಗೈದಿದ್ದಾರೆ,ಅಂತಹಾ ಮಹಾನ್ ಪುರುಷ ಇದ್ದಂತಹ ಪಾರ್ಟಿಯಲ್ಲಿ ನಾವಿಂದು ಕೆಲಸ ಮಾಡುತ್ತಿದ್ದೇವೆಂದರೆ ನಮಗಿಂತ ಭಾಗ್ಯವಂತರು ಬೇರೊಬ್ಬರಿಲ್ಲ ಎಂದು ವಾಜಪೇಯಿ ಅವರಿಗೆ 93ನೇ ವಸಂತದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಎಸ್.ಸಿ ಅಶೋಕ್ ,ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ಕೆಂಡಗಣ್ಣಪ್ಪ ,ತಾಲೂಕು ಅಧ್ಯಕ್ಷ ವಿನಯ್,ಯುವಮೋರ್ಚಾ ಅಧ್ಯಕ್ಷ ಶ್ರೀಕಂಠ,ಇನ್ನಿತರ ಬಿ.ಜೆ.ಪಿ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: