ಮೈಸೂರು

‘ಮೈಸೂರು ಕಲಾರತ್ನ’ ಪ್ರಶಸ್ತಿ ಪ್ರದಾನ

ಮೈಸೂರು ಮಹಿಳಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಮೈಸೂರು ಕಲಾರತ್ನ, ಮೈಸೂರು ಬಾಲರತ್ನ ಪ್ರಶಸ್ತಿಗಳ ಪ್ರದಾನ ಹಾಗೂ ದಸರಾ ಬೊಂಬೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಡಾ. ಜ್ಯೋತಿ ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಜೆ.ಎಸ್. ಜಗದೀಶ್, ಸ್ನೇಹ ಸ್ಪಂದನ ಮಹಿಳಾ ಮಂಡಳಿಯ ಅಧ್ಯಕ್ಷರಾದ ವಿಜಯಾ ರಾಧಾಕೃಷ್ಣ ಅವರು ಪಾಲ್ಗೊಂಡರು. ಸುಮನಾ ರಘುನಂದನ್ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಅತಿಥಿಯಾಗಿ ಲತಾಶೇಖರ್ ಅವರು ಭಾಗವಹಿಸಿದ್ದರು.

ಮೈಸೂರು ಕಲಾರತ್ನ ಪುರಸ್ಕೃತರು: ನಾಗರತ್ನ, ಸೌಭಾಗ್ಯಶೆಟ್ಟಿ, ಹೇಮಲತಾ ಕುಮಾರಸ್ವಾಮಿ, ರಜೇಶ್ವತಿ ಗಣೇಶ್, ತನುಜಾ ಅರವಿಂದ್.

ಪ್ರಶಸ್ತಿ ಪೂರಕ ಬಹುಮಾನಿತರು: ನಾಗಪ್ರಸಾದ್, ಲೀಲಾವತಿ ಇಂದ್ರೇಶ್, ಮೀರಾ ರಮೇಶ್.

ಬಾಲರತ್ನ ಪ್ರಶಸ್ತಿ ಪುರಸ್ಕೃತರು: ಪ್ರಜ್ವಲ್ ಎಂ, ದೀಕ್ಷಿತ್ ಎಂ, ರೋಹಿತ್ ಸಿ, ಹರ್ಷಿತ ಜಿ, ನಿಹಾಲ್ ಪಿ.ಎನ್, ಅಮೋಘ ಆರ್, ಸ್ಕಂದ ಎನ್, ಅರ್ಚನ.

Leave a Reply

comments

Related Articles

error: