ಮೈಸೂರು

ಪೊದಾರ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಮೈಸೂರಿನ ಹೆಬ್ಬಾಳದಲ್ಲಿರುವ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನ.16 ಬುಧವಾರದಂದು ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನಾಡಗೀತೆಯನ್ನು ಹಾಡಿ, ಹಚ್ಚೇವು ಕನ್ನಡದ ದೀಪ ಎನ್ನುತ್ತಾ, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಮಕ್ಕಳು ಭಾಷಣ, ಹಾಡು, ನೃತ್ಯಗಳ ಮೂಲಕ ಕನ್ನಡದ ಹಿರಿಮೆ ಗರಿಮೆಯನ್ನು ಕೊಂಡಾಡಿದರು.

ಶಾಲಾ ಪ್ರಾಂಶುಪಾಲರಾದ ಕೃಷ್ಣ ಬಂಗೇರ ಅವರು ಕನ್ನಡಿಗರ ಹೃದಯ ವೈಶಾಲ್ಯವನ್ನು ಕೊಂಡಾಡಿದರಲ್ಲದೇ, ಪ್ರಪಂಚದಾದ್ಯಂತ ಕನ್ನಡದ ಕೀರ್ತಿ ಇನ್ನೂ ಹೆಚ್ಚು ಮೊಳಗಲಿ ಎಂದು ಆಶಿಸಿದರು.

Leave a Reply

comments

Related Articles

error: