ಮೈಸೂರು

ಅಧಿಕಾರಿಗಳು ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ರೈತರಿಗೆ ಸಮರ್ಪಕವಾಗಿ ನೀಡಬೇಕು : ಎಂ.ರಮೇಶ್

ಮೈಸೂರು,ಡ ಡಿ.25:-  ಅಧಿಕಾರಿಗಳು ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿ ರೈತರನ್ನು ರಕ್ಷಣೆ ಮಾಡಬೇಕೆಂದು ತಾ.ಪಂ ಸದಸ್ಯ ಎಂ.ರಮೇಶ್ ತಿಳಿಸಿದರು.

ತಿ.ನರಸೀಪುರ ಸಿಡಿಎಸ್ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ ಸದಸ್ಯ ಎಂ.ರಮೇಶ್ , ದೇಶದ ಶೇಕಡ 65% ನಷ್ಟು ರೈತರು ಕೃಷಿಯನ್ನೇ ಅವಲಂಭಿಸಿದ್ದು, ಅವರ ಬೆವರಿನ ಫಲದಿಂದಾಗಿ ಇಂದು ನಾವು ಆಹಾರ ಅಭದ್ರತೆ ಕಾಡದೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿ ರೈತರನ್ನು ರಕ್ಷಣೆ ಮಾಡಬೇಕೆಂದರು.

ರೈತ ಮುಖಂಡ ಕಿರಗಸೂರು ಶಂಕರ್ ಮಾತನಾಡಿ, ದೇಶದ ಬೆನ್ನೆಲುಬು ರೈತ, ಅಂತಹ ರೈತರ ದಿನವನ್ನು ಸರ್ಕಾರ ಯಾವುದೇ ಅನುದಾನ ನೀಡದೇ ಸರಳವಾಗಿ ಆಚರಣೆ ಮಾಡುವಂತೆ ಹೇಳಿರುವುದು ಖಂಡನೀಯ. ಹಾಗಾಗಿ ಸರ್ಕಾರ ರೈತರ ದಿನವನ್ನು ರಾಷ್ಟ್ರೀಯ ಹಬ್ಬಗಳಂತೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲು ಕ್ರಮವಹಿಸಬೇಕು. ಅದಕ್ಕೆ ಬೇಕಾದ ಅಗತ್ಯ ಅನುದಾನವನ್ನು ಸಹ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಯಂತಿ ಕಾರ್ಯಕ್ರಮದಲ್ಲಿ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಲಾಯಿತು. ತಾ.ಪಂ ಸದಸ್ಯ ಶಿವಮ್ಮ, ಮುಖಂಡರಾದ ಅತ್ತಹಳ್ಳಿ ದೇವರಾಜು, ಕುರುಬೂರು ಸಿದ್ದೇಶ್, ಕರೋಹಟ್ಟಿ ಕುಮಾರಸ್ವಾಮಿ, ಕೃಷಿ ಅಧಿಕಾರಿ ಎಡಿ ಕೃಷ್ಣಮೂರ್ತಿ , ಶಿವಣ್ಣ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: