ಮೈಸೂರು

ಸೋಲಿನ ಹತಾಶೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ.ಟಿ.ದೇವೆಗೌಡ ವಿರುದ್ದ ಎ.ಸಿ.ಬಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ : ಲೋಕೇಶ್ ಆರೋಪ

ಮೈಸೂರು.ಡಿ.25: -ಸೋಲಿನ ಹತಾಶೆ ಹಾಗೂ ಕುದುರೆ ವ್ಯಾಪಾರ ವಿಫಲದಿಂದ ಕಂಗೆಟ್ಟಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರತಿಸ್ಪರ್ಧಿ ಅಮಾಯಕ ಜಿ.ಟಿ.ದೇವೆಗೌಡ ಹಾಗೂ ಅವರ ಕುಟುಂಬದವರ ವಿರುದ್ದ ಕೆ.ಎಚ್.ಬಿ ಹಗರಣಕ್ಕೆ ಸಂಭಂದಿಸಿದಂತೆ ಎ.ಸಿ.ಬಿ ಅಸ್ತ್ರ ಉಪಯೋಗಿಸಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ತಾಲೂಕು ಜೆ.ಡಿ.ಎಸ್ ಯುವ ಅಧ್ಯಕ್ಷ ಲೋಕೇಶ್ ಗಂಭೀರ ಆರೋಪ ಮಾಡಿದ್ದಾರೆ.

ಹುಣಸೂರು ನಗರದ ವರದಿಗಾರರ ಕೂಟದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಒಂದಲ್ಲ ಎರಡಲ್ಲ ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಮೀಕ್ಷೆ ನಡೆಸಿದ್ದು ಪ್ರತಿ ಬಾರಿ ಜಿ.ಟಿ.ಡಿ ಗೆ ಒಲವು ಮೂಡಿರುವುದರಿಂದ ಭಯಭೀತರಾಗಿ ಲೋಕಾಯುಕ್ತದಿಂದ ಕ್ಲೀನ್ ಚಿಟ್ ಪಡೆದಿದ್ದರೂ ಪುನ: ಜಿ.ಟಿ.ಡಿ ಕುಟುಂಬ ವಿರುದ್ಧ ಹುನ್ನಾರ ನಡೆಸಲು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಅವರ ಘನತೆಗೆ ತಕ್ಕದಲ್ಲ ಎಂದು ಎಚ್ಚರಿಸಿದ ಅವರು ಮುಖ್ಯಮಂತ್ರಿಗಳು ಒಂದು ರೀತಿಯ ದ್ವೇಷ ರಾಜಕಾರಣ ಮಾಡುತ್ತಿದ್ದರೆ ತಾಲೂಕು ಶಾಸಕರದ್ದು ಮತ್ತೊಂದು ರೀತಿ ಜಾತಿ ರಾಜಕಾರಣ ಎಂದು ಲೇವಡಿ ಮಾಡಿದರು. ಶಾಸಕ ಮಂಜುನಾಥ್‍ರವರು ತಾಲೂಕಿನಲ್ಲಿ ಜೆ.ಡಿ.ಎಸ್ ಪ್ರಬಲವಿರುವ ಗ್ರಾಮಗಳ ಅಭಿವೃಧಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ಶಾಸಕರು ದ್ವೇಷ ರಾಜಕಾರಣ ಬಿಟ್ಟು ರಾಜ್ಯ ಹಾಗೂ ತಾಲೂಕು ಅಭಿವೃದಿ ಕಡೆಗಣಿಸಿದರೆ ಯುವ ಜೆ.ಡಿ.ಎಸ್ ಘಟಕದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆ.ಡಿ.ಎಸ್ ಅಧ್ಯಕ್ಷ ಮಾದೇಗೌಡ ಹಿರಿಯ ಮುಖಂಡರಾದ ಪುಟ್ಟಮಾದಯ್ಯ ,ವಸಂತಮ್ಮ,ನಿಂಗರಾಜು,ಹರೀಶ್,ಯುವ ಘಟಕ ಕಾರ್ಯದರ್ಶಿ ರವೀಶ್,ಎಸ್.ಸಿ ಘಟಕ ಅಧ್ಯಕ್ಷ ನಾಗರಾಜು ಮುಖಂಡರಾದ ಶಿವು,ಹರೀಶ್ ಸೇರದಂತೆ ಆನೇಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: