
ಮೈಸೂರು, ಡಿ. 25 : ನಗರದ ಬೋಗಾದಿಯ ಲೈಕ್ ಮೈಂಡ್ ಸಲೂನ್ ಮೇಲೆ ಪೊಲೀಸ್ ದಾಳಿ ನಡೆಸಿ ವೇಶ್ಯವಾಟಿಕೆ ನಡೆಸುತ್ತಿದ್ದವರನ್ನು ಬಂಧಿಸಲಾಗಿತ್ತು, ಬಂಧಿತ ಮಹಿಳೆಗೆ ಈಗಾಗಲೇ ಹಲವಾರು ಕೋನಗಳಿಂದ ಒತ್ತಡ ಹೇರಲಾಗುತ್ತಿದ್ದು ಅವಳಿಗೆ ಸೂಕ್ತ ರೀತಿಯಲ್ಲಿ ಪುನರ್ ವಸತಿ ಸೇರಿದಂತೆ ಭದ್ರತೆ ವಹಿಸಬೇಕೆಂದು ಪಿಯುಸಿಎಲ್ ಅಧ್ಯಕ್ಷ .ರತಿರಾವ್ ಕೋರಿದ್ದಾರೆ.
ಪಾರ್ಲರ್ ಗಳು ಲೈಂಗಿಕ ತೃಪ್ತಿಯ ತಾಣಗಳಲ್ಲ, ಬಹುತೇಕ ಮಸಾಜ್ ಪಾರ್ಲರ್ ಗಳು ಸುಳ್ಳು ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿವೆ ಎಂದು ಆರೋಪಿಸಿರುವ ಅವರು, ಮಹಿಳೆಯರು ಪುರುಷರಿಗೆ ಮಸಾಜ್ ಮಾಡುವುದನ್ನು ಕಾನೂನು ಬಾಹಿರಗೊಳಿಸಿ, ಅಂತಹ ಪಾರ್ಲರ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಭ್ರೂಣ ಲಿಂಗ ಪತ್ತೆ ನಿಷೇಧದಂತೆ ಮಸಾಜ್ ಪಾರ್ಲರ್ ಗಳ ಮೇಲೆಯೂ ನಿಗವಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)