
ಮೈಸೂರು
ನಗರದ ಬಿಜೆಪಿಯಿಂದ ಕನಕದಾಸ ಜಯಂತಿ ಆಚರಣೆ
ಕನಕದಾಸರು ಭಕ್ತಿಪಂಥದ ಪ್ರಮುಖ ಸಂತ ಕವಿ ಹಾಗೂ ದಾರ್ಶನಿಕರು ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸ ಕೆಳಸ್ಥರದಿಂದ ಬಂದ ವ್ಯಕ್ತಿಯಾದರೂ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾನ್ ಸಂತ. ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಮಾನತೆಯ ತತ್ವ ಸಾರಿದ ಶ್ರೇಷ್ಠ ದಾರ್ಶನಿಕ ಎಂದು ಬಣ್ಣಿಸಿದರು.
ಮಾಜಿ ಎಂಎಲ್ಸಿ ವಿಜಯ್ ಶಂಕರ್, ಉಪ ಮೇಯರ್ ವನಿತಾ ಪ್ರಸನ್ನ, ರಾಜ್ಯ ರೈತ ಮೋರ್ಚಾದ ಮಲ್ಲಪ್ಪ, ತೋಂಟದಾರ್ಯ, ರಮೇಶ್, ಪಾಲಿಕೆ ಸದಸ್ಯರಾದ ನಂದೀಶ್ ಪ್ರೀತಂ, ಬಿ.ವಿ.ಮಂಜುನಾಥ್, ಗಿರೀಶ್ ಪ್ರಸಾದ್, ಮಹಿಳಾ ಮೋರ್ಚಾದ ಚಿಕ್ಕಮ್ಮ ಬಸವರಾಜು ಉಪಸ್ಥಿತರಿದ್ದರು.