ಕರ್ನಾಟಕಪ್ರಮುಖ ಸುದ್ದಿಮೈಸೂರು

ಹಳೆ ನೋಟುಗಳ ವಿನಿಮಯ ಮೊತ್ತ ದಿಢೀರ್ 2,000 ಕ್ಕೆ ಇಳಿಕೆ

ಇದುವರೆಗೂ ಹಳೇ ನೋಟುಗಳ ವಿನಿಮಯ ಮೊತ್ತ 4,000 ಇದ್ದಿದ್ದು,  ದಿಢೀರ್ 2,000 ರು.ಗೆ ಇಳಿಯಲಿದೆ. ಈ ಹೊಸ ಆದೇಶ ನಾಳೆಯಿಂದ ಜಾರಿಯಾಗಲಿದೆ. ಸರ್ಕಾರ ಈವರೆಗೆ 4,000 ರು. ಗೆ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಸಾರ್ವಜನಿಕರಿಗೆ ಹೊಸ ತಲೆನೋವು ಶುರುವಾಗಿದೆ.

ಮದುವೆ ಸಮಾರಂಭಗಳಿಗೆ ಬ್ಯಾಂಕಿನಿಂದ ಅವರ ಪೋಷಕರಿಗೆ 2.5 ಲಕ್ಷ ರು. ವಿತ್ ಡ್ರಾ ಮಾಡಲು ಅವಕಾಶವಿದೆ. ಅಲ್ಲದೇ ಎಪಿಎಂಸಿ ವರ್ತಕರಿಗೆ ವಾರಕ್ಕೆ 50,000 ರು. ಪಡೆಯಲು ಅವಕಾಶ ನೀಡಿದೆ. ಸರ್ಕಾರದ ಈ ಹೊಸ ಆದೇಶದಿಂದಾಗಿ ಜನರು ಪರದಾಡುವಂತಾಗಿದೆ. ಅಕೌಂಟ್‍ನಲ್ಲಿ ಹಣ ಇದ್ದರೂ ಸಹ ಅದನ್ನು ಪಡೆಯದ ಪರಿಸ್ಥಿತಿಯಲ್ಲಿದ್ದಾರೆ.

Leave a Reply

comments

Related Articles

Check Also

Close
error: