
ಸಚಿವ ತನ್ವೀರ್ ಸೇಠ್ ಅವರು ರಾಯಚೂರಿನಲ್ಲಿ ಟಿಪ್ಪು ಜಯಂತಿ ವೇಳೆ ವೇದಿಕೆ ಮೇಲೆ ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಸಚಿವರು ವೀಕ್ಷಿಸಿದ್ದು ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಚಿತ್ರಗಳು ಎಂದು ಕೆಲವು ಮೂಲಗಳು ತಿಳಿಸಿವೆ.
ಅಮೆರಿಕದ ಅಧ್ಯಕ್ಷರಾಗಿ ನ.8ರಂದು ಅನಿರೀಕ್ಷಿತ ಗೆಲುವು ಸಾಧಿಸಿದ್ದರು. ಸಚಿವ ತನ್ವೀರ್ ಸೇಠ್ಗೂ ಈ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿದ್ದು ಅವರ ಮೂರನೇ ಪತ್ನಿ ಮೆಲನಿಯಾ ಅವರ ಪೋಟೋಗಳು ಮೇಸೇಜ್ನಲ್ಲಿ ಇದ್ದವು ಅದರ ಸಮೇತ ಅಪಲೋಡ್ ಆಯ್ತು. ಪೋಟೋಗಳು ಹದಿನೈದು ವರ್ಷ ಹಳೆಯದಾಗಿದ್ದು ರೂಪದರ್ಶಿಯಾಗಿದ್ದ ಮೆಲನಿಯಾ ಮ್ಯಾಗಜಿನ್ವೊಂದಕ್ಕೆ ನೀಡಿದ ತುಣುಕುಗಳು ಎನ್ನಲಾಗಿದೆ.
ನ.10ರಂದು ರಾಯಚೂರಿನ ರಂಗಮಂದಿರದಲ್ಲಿ ನಡೆದಿದ್ದ ಟಿಪ್ಪು ಜಯಂತಿ ವೇಳೆ ಸಚಿವ ತನ್ವೀರ್ ಸೇಠ್ ಅವರು ವೇದಿಕೆಯ ಮೇಲೆಯ ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ ಪಕ್ಷದ ಮುಖಂಡ ಹಾಗೂ ವಿರೋಧ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದರು.