ಮೈಸೂರು

ಹಾಳಾದ ಪಂಪ್ : ಸಂಪ್ ನಿಂದಲೇ ಮಕ್ಕಳಿಂದ ನೀರು ತೆಗೆಸುತ್ತಿರುವ ಶಿಕ್ಷಕರು; ಮಕ್ಕಳ ಜೀವದ ಜೊತೆ ಚೆಲ್ಲಾಟ

ಮೈಸೂರು,ಡಿ.26:-  ಶಿಕ್ಷಣ ಸಚಿವರ ತವರಲ್ಲೇ ಮಕ್ಕಳ ಜೀವಕ್ಕೆ ಬೆಲೆಯಿಲ್ಲದಂತಾಗಿದೆ. ಶಾಲೆಯಲ್ಲಿ ಹನಿ ನೀರು ಕುಡಿಯಲೂ ಮಕ್ಕಳ ಜೀವವನ್ನೇ ಒತ್ತೆ ಇಡಲಾಗುತ್ತಿದೆ. ಶಾಲಾ ಶಿಕ್ಷಕರು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು, ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ತಂದ್ರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ನೀರೆತ್ತುವ ಮೋಟಾರ್ ಕೆಟ್ಟಿರುವುದರಿಂದ ಮಕ್ಕಳ ಜೀವಕ್ಕೆ ಕುತ್ತು ಎದುರಾಗಿದೆ ಕುಡಿಯುವ ನೀರಿಗಾಗಿ ಮಖ್ಕಳು ಸಂಪ್‌ಗೆ ಇಳಿಯಬೇಕಿದೆ. ತಂದ್ರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೋಟಾರ್ ಕೆಟ್ಟಿರುವುದರಿಂದ ಮಕ್ಕಳಿಂದಲೇ ನೀರು ತುಂಬಿಸುತ್ತಿದ್ದು, ನೀರು ಬೇಕು ಅಂದರೆ ಮಕ್ಕಳೇ ಸಂಪ್ ಗೆ ಇಳಿಯಬೇಕು.

10 ಅಡಿ ಆಳದ ಸಂಪ್‌ಗೆ ಇಳಿದು ನೀರು ತುಂಬಿ ತರಬೇಕು. ಬಿಸಿಯೂಟ ಹಾಗೂ ಕುಡಿಯುವ ನೀರಿಗಾಗಿಯೂ ಸಂಪ್‌ಗೆ ಮಕ್ಕಳೇ ಇಳಿಯಬೇಕು. ಮೋಟಾರ್ ಕೆಟ್ಟು ಹಲವು ತಿಂಗಳೇ ಕಳೆದಿದ್ದರೂ  ಮೋಟಾರ್ ರಿಪೇರಿ ಮಾಡಿಸದೆ ಮಕ್ಕಳನ್ನೇ ಇಳಿಸಿ ನೀರೆತ್ತಿಸಲಾಗುತ್ತಿದೆ. ಯಾವುದೇ ರಕ್ಷಣಾ ಕವಚ ನೀಡದೆ ಮಕ್ಕಳನ್ನ ಸಂಪ್‌ಗೆ  ಳಿಸಲಾಗುತ್ತಿದ್ದು, ಘಟನೆ ಕಂಡು ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮೋಟಾರ್ ರಿಪೇರಿ ಮಾಡಿಸದೇ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಬಳಿ ಬೀದಿ ನಾಯಿಗಳ ಕಾಟವಿದೆ ಕಟ್ಟಡವು ದುರಸ್ಥಿಯಾಗದೇ ಮಕ್ಕಳು ಪರದಾಡುವಂತಾಗಿದೆ. ಶಾಲೆಯ ಸಮಸ್ಯೆಯನ್ನು ಸರಿಪಡಿಸುವಂತೆ  ಗ್ರಾಮದ ಸ್ಥಳೀಯರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: