ಕರ್ನಾಟಕಪ್ರಮುಖ ಸುದ್ದಿ

ಜಾತ್ಯತೀತವೆಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು, ಒಪ್ಪಿಸಿಕೊಳ್ಳುವುದು: ಸಚಿವರಿಗೆ ಪ್ರಕಾಶ್ ರೈ ಪತ್ರ

ಬೆಂಗಳೂರು,ಡಿ.26-ತಮ್ಮ ಹೇಳಿಕೆ ಮೂಲಕ ವಿವಾದ ಸೃಷ್ಟಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರಿಗೆ ಬಹುಭಾಷಾ ನಟ ಪ್ರಕಾಶ್ ರೈ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಅನಂತ್ ಕುಮಾರ್ ಹೆಗಡೆ ಜಾತ್ಯತೀತರಿಗೆ ತಂದೆ-ತಾಯಿ ಇಲ್ಲ ಎಂಬರ್ಥದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಅವರ ಹೇಳಿಕೆಗೆ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿರುವ ಬಹುಭಾಷಾ ನಟ ಪ್ರಕಾಶ್ ರೈ, ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಜಾತ್ಯತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಸಿಕೊಳ್ಳುವುದಾಗಿದೆ ಎಂದು ಹೇಳಿದ್ದಾರೆ.

ಜಾತ್ಯತೀತ ಎಂದರೆ ಯಾವುದೇ ಧರ್ಮ ಅಥವಾ ನಂಬಿಕೆಯ ಜೊತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ. ಒಬ್ಬನ ಪೋಷಕರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು ಮಾಡಿದೆ. ಕೆಲವರು ಸಂವಿಧಾನದಲ್ಲಿ ಜಾತ್ಯತೀತ ಎಂದು ನಮೂದಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪದವಿರುವ ಕಾರಣ ಅದನ್ನು ಬಿಜೆಪಿ ಗೌರವಿಸುತ್ತದೆ. ನಾವು ಮುಂದಿನ ದಿನಗಳಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ. ಈ ಹಿಂದೆ ಸಂವಿಧಾನವನ್ನು ಹಲವು ಬಾರಿ ಬದಲಾಯಿಸಲಾಗಿತ್ತು ಎಂದು ಕೊಪ್ಪಳ ಜಿಲ್ಲೆಯಲ್ಲಿ ಬ್ರಾಹ್ಮಣ ಯುವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಗಡೆ ಹೇಳಿಕೆ ನೀಡಿದ್ದರಲ್ಲದೆ, ಜಾತ್ಯತೀತರು ಎಂದರೆ ತಂದೆತಾಯಿ ಇಲ್ಲದವರು ಎಂದು ಹೇಳಿಕೆ ನೀಡಿದ ಹೆಗಡೆ ಜಾತ್ಯತೀತರನ್ನು ಹೀನಾಯವಾಗಿ ಟೀಕಿಸಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: