ಕರ್ನಾಟಕಮೈಸೂರು

ಇಂಜಿನಿಯರ್ಸ್ ದಿನದ ಪ್ರಯುಕ್ತ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‍ನಲ್ಲಿ ವಿವಿಧ ಕಾರ್ಯಕ್ರಮಗಳು

ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ದಿ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯಲ್ಲಿ 49ನೇ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ.

ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನದ ನಿಮಿತ್ತ ಇಂಜಿನಿರ್ಸ್ ಡೇ ಆಚರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 8 ರಂದು ಸಂಜೆ 5.30ಕ್ಕೆ ಕಾಲೇಜಿನ ಎಸ್.ಪಿ.ಭಟ್ ಹಾಲ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕುರಿತ ವಿಚಾರ ಸಂಕಿರಣ ನಡೆಯಲಿದ್ದು, ಮೈಸೂರು ವಿವಿ ಕುಲಸಚಿವ ನಾಗರಾಜ ಅವರು ಅತಿಥಿಗಳಾಗಿ ಮಾತನಾಡಲಿದ್ದಾರೆ. ಐಇಐ ಅಧ್ಯಕ್ಷ ಡಾ. ಟಿ.ಎಚ್. ಉದಯಶಂಕರ ಅಧ್ಯಕ್ಷತೆ ವಹಿಸಲಿದ್ದಾರೆ.

ಸೆಪ್ಟೆಂಬರ್ 10ರಂದು ಸಂಜೆ 5.30ಕ್ಕೆ ಎಸ್.ಪಿ. ಭಟ್ ಹಾಲ್‍ನಲ್ಲಿ ‘ಸ್ಕಿಲ್ ಡೆವಲಪ್‍ಮೆಂಟ್ ಫಾರ್ ಯಂಗ್ ಇಂಜಿನಿಯರ್ಸ್ ಟು ರಿಫಾರ್ಮ್ ದಿ ಕೋರ್ ಸೆಕ್ಟರ್: ವಿಷನ್ 2025’ ವಿಷಯದ ಕುರಿತ ತಾಂತ್ರಿಕ ವಿಚಾರ ಸಂಕಿರಣ ನಡೆಯಲಿದೆ. ಜೆಎಸ್‍ಎಸ್ ಮಹಾ ವಿದ್ಯಾಪೀಠದ ಜಂಟಿ ನಿರ್ದೇಶಕ ಬಿ.ಆರ್. ಉಮಾಕಾಂತ, ಬೆಂಗಳೂರಿನ ರೂಮನ್ ಟೆಕ್ನಾಲಜೀಸ್‍ನ ಜನರಲ್ ಮ್ಯಾನೇಜರ್ ವಿ. ಜಯಂತ್ ಅತಿಥಿಗಳಾಗಿ ಮಾತನಾಡಲಿದ್ದಾರೆ.

ಸೆಪ್ಟೆಂಬರ್ 11ರಂದು ಸಂಸ್ಥೆಯ ಸರ್.ಎಂ.ವಿ. ಆಡಿಟೋರಿಯಂನಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸೆಪ್ಟೆಂಬರ್ 14-15 ರಂದು ಕಲೆ, ಕರಕುಶಲ ಮತ್ತು ತಾಂತ್ರಿಕ ವಸ್ತುಗಳ ಪ್ರದರ್ಶನವಿದೆ. 15ರಂದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಕೆ.ಬಿ. ಭಾಸ್ಕರ್ ಅವರು ತಿಳಿಸಿದ್ದಾರೆ.

Leave a Reply

comments

Related Articles

error: