ಮೈಸೂರು

ಈ ಸಾಲಿನ ಪರೀಕ್ಷೆಗಳಿಗೆ ಸರ್ಕಾರ ಕಠಿಣ ಕ್ರಮಗಳನ್ನು ಮಾಡಿಕೊಂಡಿದೆ : ಸಚಿವ ತನ್ವೀರ್ ಸೇಠ್

ಮೈಸೂರು,ಡಿ.26:- ಖಾಸಗಿ ಶಾಲೆಗಳಿಗರ ದರ ನಿಗದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಈಗಾಗಲೇ ಮಸೂದೆ ಜಾರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಬಾರಿ ಜಾರಿ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ. ಶಿಕ್ಷಕರ ವರ್ಗವಾಣೆ ವಿಚಾರ ಶಿಕ್ಷಕರ ಅಭಿಪ್ರಾಯ ಕ್ಕೆಬಿಟ್ಟಿದ್ದೇವೆ. ಈ ಸಾಲಿನಲ್ಲಿ ಪಾರರ್ಶಕವಾಗಿ ಕೌನ್ಸಿಲ್ ನಡೆಸಲು ಸರ್ಕಾರ ಮುಂದಾಗಿದೆ. ಸಂವಿಧಾನ ಬದಲಾವಣೆ ವಿಚಾರ ಬಿಜೆಪಿ ಮನಸ್ಥಿತಿಯನ್ನು ತೋರುತ್ತದೆ. ಅನಂತಕುಮಾರ್ ಹೆಗಡೆ ಅವರ ಮಾತುಗಳು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು. ಈ ಸಾಲಿನ ಪರೀಕ್ಷೆಗಳಿಗೆ ಸರ್ಕಾರ ಕಠಿಣ ಕ್ರಮಗಳನ್ನು ಮಾಡಿಕೊಂಡಿದೆ. ಕಳೆದ ಬಾರಿ ಪ್ರಶ್ನೆ ಪತ್ರಿಕಾ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಈ ಬಾರಿ ಬಾರ್ ಕೋಡ್ ಸಿಸ್ಟಮ್ ಹಾಗೂ ಭದ್ರತಾ ಸಿಬಂದ್ದಿಗಳನ್ನು ನಿಯೋಜಿಸಿದೆ ಎಂದರು. ಚುನಾವಣೆಗೆ ಯಾವುದೇ ಕಾರಣಕ್ಕೂ ನನ್ನ ಎನ್  ಆರ್ ಕ್ಷೇತ್ರ ಬದಲವಾಣೆ ಮಾಡುವುದಿಲ್ಲ. ನಾನು ರಾಯಚೂರಿನಲ್ಲಿ ಸ್ಪರ್ಧೆ ಮಾಡುವೆ ಎಂಬುವುದು ಉಹಾಪೊಹ. ನನ್ನ ತವರು ಕ್ಷೇತ್ರ ಎನ್ ಅರ್ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: