ಕರ್ನಾಟಕ

ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಸಾವು

ರಾಜ್ಯ(ಕಾರವಾರ)ಡಿ.26:- ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ  ದಾಂಡೇಲಿ ಸಮೀಪದ ಮಾವಳಿಂಗ ಕಾಳಿ ನದಿಯಲ್ಲಿ ನಡೆದಿದೆ.

ಮೃತರನ್ನು ಮಾಳಾಪುರ ಧಾರವಾಡ ನಿವಾಸಿಗಳಾದ ಪದ್ಮಪ್ರಿಯ ಪಾಟೀಲ್ (23)ಹಾಗೂ ರಜನಿ ಆನಂದ ಪಾಟೀಲ್ (21) ಎಂದು ಗುರುತಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಮಾವಳಿಂಗ ಗ್ರಾಮದಲ್ಲಿ ರಾಫ್ಟಿಂಗ್ ಬಳಿ ಈಜುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಪ್ರವಾಸಕ್ಕೆಂದು ಬಂದಿದ್ದ 13ಜನರಲ್ಲಿ ಇಬ್ಬರು ಯುವತಿಯರು ನೀರುಪಾಲಾಗಿದ್ದಾರೆ. ಕುಟುಂಬಸ್ಥರ ಜೊತೆಗೆ ಪ್ರವಾಸಕ್ಕೆ ಬಂದಾಗ ಘಟನೆ ನಡೆದಿದೆ.  ಮೃತರು ಇಬ್ಬರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: