
ದೇಶಪ್ರಮುಖ ಸುದ್ದಿಮನರಂಜನೆ
ರಾಮಾಯಣದ ವಿಭೀಷಣ ಪಾತ್ರಧಾರಿ ಮುಖೇಶ್ ರಾವತ್ ಅಪಘಾತದಲ್ಲಿ ಸಾವು?
ರಮಾನಂದ ಸಾಗರ್ ಅವರ ನಿರ್ದೇಶನದ ದೂರದರ್ಶನದ ಅತ್ಯಂತ ಜನಪ್ರಿಯ ಧಾರಾವಾಹಿ ರಾಮಾಯಣದ ವಿಭೀಷಣ ಪಾತ್ರಧಾರಿ ಮುಖೇಶ್ ರಾವತ್ (66) ಅವರ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ.
ಮುಂಬೈನ ಖಾಂಡಿವಿಲಿ ರೈಲ್ವೆ ಹಳಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಮಂಗಳವಾರ ಬೆಳಿಗ್ಗೆ 9:30ಕ್ಕೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಹಳಿ ದಾಟುವಾಗು ರೈಲು ಢಿಕ್ಕಿಯಾಗಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದಾಕ್ಷಣ ಸ್ಟೇಷನ್ ಮಾಸ್ಟರ್ ಹಳಿ ಮೇಲೆ ಬಿದ್ದಿದ್ದ ಮುಖೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅದಾಗಲೇ ಅವರು ಕೊನೆಯುಸಿರೆಳೆದಿದ್ದರು. ರಾತ್ರಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಖಾಂಡಿವಿಲಿ ಪಶ್ವಿಮ ಪ್ರದೇಶದಲ್ಲಿ ವಾಸವಾಗಿದ್ದ ರಾವಲ್ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮುಖೇಶ್ ರಾವತ್ ಗುಜರಾತಿ ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು.