Uncategorized

ರಿಯಲ್ ಎಸ್ಟೇಟ್ ಬಿಸ್‍ನೆಸ್‍ಮೆನ್‍ಗಳ ಸಭೆ : ವಿವಿಧ ಇಲಾಖೆಗಳಲ್ಲಿ ಕಡತ ವಿಲೇವಾರಿ ವಿಳಂಬ : ಸದಸ್ಯರ ಅಸಮಾಧಾನ

ರಾಜ್ಯ(ಮಡಿಕೇರಿ) ಡಿ. 26 :-  ಕೊಡಗು ಜಿಲ್ಲಾ ರಿಯಲ್ ಎಸ್ಟೇಟ್ ಬಿಸ್‍ನೆಸ್‍ಮೆನ್ ಅಸೋಸಿಯೇಷನ್‍ನ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಸಂಸ್ಥೆಯ ಅಧ್ಯಕ್ಷ ತೋಲಂಡ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಹೋಟೆಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಸೋಸಿಯೇಷನ್‍ನ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಭೂ ಪರಿವರ್ತನೆಯಲ್ಲಿ ಆಗುತ್ತಿರುವ ವಿಳಂಬ, ಕನಿಷ್ಟ 10 ಸೆಂಟ್ ಜಾಗಕ್ಕೆ ಭೂಪರಿವರ್ತನೆಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಪ್ರಾಧಿಕಾರದ ಇಲಾಖೆಯಿಂದ ನಿರೀಕ್ಷೇಪಣಾ(ಎನ್.ಒ.ಸಿ)ಪತ್ರ ನೀಡದೇ ಇರುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸರ್ವೆ ಇಲಾಖೆಯಲ್ಲಿ ಮಾರಾಟದ ಉದ್ದೇಶಕ್ಕಾಗಿ 11ಇ ನಕ್ಷೆ (5 ಸೆಂಟಿನಿಂದ 20 ಸೆಂಟ್‍ವರೆಗೆ) ನೀಡುತ್ತಿಲ್ಲ. ಕಂದಾಯ ಇಲಾಖೆಯಲ್ಲಿ, ಭೂಮಿ ಕೇಂದ್ರದಲ್ಲಿ ಕಂಪ್ಯೂಟರ್ ತಾಂತ್ರಿಕ ದೋಷದಿಂದಾಗಿ ಸಾರ್ವಜನಿಕರ ಕೆಲಸ, ಕಾರ್ಯಗಳು ವಿಳಂಬವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತವಾಯಿತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರಮುಖ ಕೇಂದ್ರಗಳಿಗೆ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ಸದಸ್ಯತ್ವವನ್ನು ಹೆಚ್ಚು ಮಾಡಲು ಸಭೆ ನಿರ್ಧರಿಸಿತು.

ಈ ಸಂದರ್ಭ ಅಸೋಸಿಯೇಷನ್‍ನ ಉಪಾಧ್ಯಕ್ಷರಾದ ಮುಬಿನ್ ಅಹಮ್ಮದ್, ಗೌರವಧ್ಯಕ್ಷರಾದ ಕೋಡಿ ಚಂದ್ರಶೇಖರ್, ಖಜಾಂಚಿ ಟ್ರಾವೆಲ್ ಜಾನ್‍ಸನ್ ಪಿಂಟೊ, ಸಂಘಟನಾ ಕಾರ್ಯದರ್ಶಿ ಬಿ.ಎಸ್.ಸದಾಶಿವ ರೈ, ಸಂಚಾಲಕರಾದ ಎನ್.ಡಿ.ಕುಶಾಲಪ್ಪ, ನಿರ್ದೇಶಕರುಗಳಾದ ವಿ.ಅಬ್ದುಲ್‍ಕರೀಂ, ಜೆ.ಎನ್. ಪದ್ಮನಾಭ, ಕೇಚನ ಬೆಳ್ಯಪ್ಪ, ಎಂ.ಎಂ.ಹಾರುನ್, ಸದಸ್ಯರುಗಳಾದ ಯು.ಇಮ್ರಾನ್, ಎ.ಎ.ಪಳಂಗಪ್ಪ, ಎನ್.ಎ.ಇಬ್ರಾಹಿಂ, ಕೆ.ಟಿ.ಬಷೀರ್, ಎ.ಟಿ. ಪೊನ್ನಪ್ಪ, ಎ.ಪಿ.ಚೇತನ್, ಪಚ್ಚಾರಂಡ ಸುರೇಶ್, ಡಿ.ಎಮ್.ಕಿರಣ್, ಕೆ.ಬಿ. ಉತ್ತಪ್ಪ, ಪುಷ್ಪ ಪೂಣಚ್ಚ, ಸಿ.ಎನ್.ಮಂದಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: