ಕರ್ನಾಟಕಪ್ರಮುಖ ಸುದ್ದಿ

“ನೋಟು” ಮಾಹಿತಿ ಸೋರಿಕೆ ಸಿಬಿಐ ತನಿಖೆಯಾಗಲಿ

ಆರ್.ಬಿ.ಐ ನೂತನವಾಗಿ ಚಲಾವಣೆಗೆ ತಂದಿರುವ ಐದು ನೂರು ಹಾಗೂ ಎರಡು ಸಾವಿರ ರೂಪಾಯಿ ಹೊಸ ನೋಟುಗಳ ಬಗ್ಗೆ ನನಗೆ ನಾಲ್ಕು ತಿಂಗಳ ಹಿಂದೆಯೇ ತಿಳಿದಿತ್ತು. ನೋಟಿನ ವಿನ್ಯಾಸವನ್ನು ನಾವು ಮಾಡಿಯೂ ಕೊಟ್ಟಿದ್ದೇವು ಅದು ತಿರಸ್ಕೃತವಾಯಿತು ಎಂದು ಮೈಸೂರು ಟಂಕಸಾಲೆ ನೌಕರರ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ರಾಮದಾಸ್ ಹೇಳಿಕೆ ನೀಡಿರುವುದು ಗೌಪ್ಯವಾಗಿರಬೇಕಿದ್ದ ವಿಷಯವೂ ಬಹಿರಂಗವಾಗಿದ್ದು ಆಂತರಿಕ ಭದ್ರತಾ ವೈಫಲ್ಯ ಸೂಚಿಸುತ್ತದೆ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ ಕಿಡಿಕಾರಿ ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಅವರು, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಳೆ ನೋಟುಗಳ ಅಮಾನ್ಯವಾಗುವ ವಿಷಯವೂ ರಾಮದಾಸ್ ಅವರಿಗೆ ಮುಂಚಿತವಾಗಿಯೇ ತಿಳಿದಿದ್ದು ಎನ್ನುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದ್ದು, ಒಂದು ವೇಳೆ ರಾಮದಾಸ್ ಹೇಳಿಕೆ ನಿಜವಾಗಿದ್ದರೇ ಗೌಪ್ಯ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಮೋದಿಯವರಿಗೆ ಶಿಕ್ಷೆಯಾಗಲಿ. ಇಲ್ಲವಾದಲ್ಲಿ ಸುಳ್ಳಾಡಿದ್ದಕ್ಕೆ ರಾಮದಾಸ್ ಅವರಿಗೆ ಶಿಕ್ಷೆಯಾಗಲಿ. ರಹಸ್ಯ ಬಹಿರಂಗದ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

Leave a Reply

comments

Related Articles

error: