ಮೈಸೂರು

ಡಿ. 27ರಂದು ಚಾ.ನಗರದಲ್ಲಿ ಸಾಧಕರೊಂದಿಗೆ ಸಂವಾದ, ಕವಿಗೋಷ್ಠಿ ಕಾರ್ಯಕ್ರಮ

ಚಾಮರಾಜನಗರ (ಡಿ. 27): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜೆಎಸ್‍ಎಸ್ ಮಹಿಳಾ ಕಾಲೇಜು ಇವರ ಸಹಯೋಗದೊಂದಿಗೆ ಡಿಸೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.

ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಕೃಷ್ಣಮೂರ್ತಿ ಹನೂರು ಅವರು ಕಾರ್ಯಕ್ರಮ ಉದ್ಘಾಟಿಸುವರು. ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎ.ಜಿ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಜೆಎಸ್‍ಎಸ್ ವಿದ್ಯಾಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು.

ಸಾಧಕರಾದ ನಾಡಿನ ಪ್ರಸಿದ್ಧ ಸಾಹಿತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಪ್ರೊ.ಮಲೆಯೂರು ಗುರುಸ್ವಾಮಿ ಅವರೊಂದಿಗೆ ಸಂವಾದ ನಡೆಯಲಿದೆ.

ಕವಿಗೋಷ್ಠಿಯಲ್ಲಿ ಹಿರಿಯ ಕವಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿ.ನಾಗಣ್ಣ ಅಧ್ಯಕ್ಷತೆ ವಹಿಸುವರು. ಕವಿ ಸೋಮಶೇಖರ ಬಿಸಲ್ವಾಡಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಎಂ.ಪುಟ್ಟತಾಯಮ್ಮ, ಚಾ.ಶ್ರೀ.ಜಗದೀಶ್, ಗುಂ.ಪು.ದೇವರಾಜು, ಗು.ಬಿ.ರಮೇಶ್, ಎನ್.ಮಹೇಶ್, ಡಾ.ಕೆ.ಲಕ್ಷ್ಮಿ ಪ್ರೇಮಕುಮಾರ್, ಸಿ.ಶಂಕರ್ ಅಂಕನಶೆಟ್ಟಿಪುರ, ಗಿರೀಶ್ ಹರವೆ, ಸಿ.ಸಿದ್ದರಾಜು, ಬಾಳಗುಣಸೆ ಮಂಜುನಾಥ, ಬಿ.ಎಸ್.ಗವಿಸ್ವಾಮಿ, ಮದ್ದೂರು ದೊರೆಸ್ವಾಮಿ, ಜಿ.ಡಿ. ದೊಡ್ಡಯ್ಯ, ನಂಜುಂಡಸ್ವಾಮಿ ಹರದನಹಳ್ಳಿ, ಎಂ. ರಾಜೇಂದ್ರ ಪ್ರಸಾದ್, ಕಾಳಿಂಗಸ್ವಾಮಿ ಸಿದ್ದಾರ್ಥ ಹಾಗೂ ನಾಟಕ ಭಾರ್ಗವ ಕೆಂಪರಾಜು ಆಹ್ವಾನಿತ ಕವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

(ಎನ್‍ಬಿ)

Leave a Reply

comments

Related Articles

error: