ಮೈಸೂರು

ಕ್ರಿಸ್ಮಸ್ ದಿನದಂದೇ ಮನೆ ದೋಚಿದ ಕಳ್ಳರು

ಮೈಸೂರು,ಡಿ.27:- ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ವಿದೇಶಿ ಹಣ ಮತ್ತು ಲಕ್ಷಾಂತರ ರೂ.ಮೌಲ್ಯದ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಜಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ ಲೀಲಾ ಥಾಮಸ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಡಿ.25ರಂದು ಅವರು ಮಧ್ಯಾಹ್ನ 1ಗಂಟೆಗೆ ಕುಟುಂಬದೊಂದಿಗೆ ಊಟಕ್ಕೆ ತೆರಳಿ ಸಂಜೆ ವಾಪಸ್ ಮನೆಗೆ ಬಂದಾಗ ಮನೆಯ ಬಾಗಿಲು ಮುರಿದಿದ್ದು, ಮನೆಯಲ್ಲಿದ್ದ ಫೋನ್, ಸ್ಯಾಮಸಂಗ್ ಮೊಬೈಲ್, ವಾಚ್, ಡೈಮಂಡ್ ರಿಂಗ್, ಎರಡು ಕ್ಯಾಮರಾ, ಐಪ್ಯಾಡ್, 140 ಯೂರೋ ವಿದೇಶಿ ಹಣ, ಸಿಸಿಕ್ಯಾಮರಾ, ಡಿವಿಆರ್ ಗಳನ್ನು ಕಳುವು ಮಾಡಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: