ಪ್ರಮುಖ ಸುದ್ದಿಮೈಸೂರು

ಸಾವಿರಾರು ರೈತರಿಂದ ಸುವರ್ಣ ಸೌಧಕ್ಕೆ ಮುತ್ತಿಗೆ: ಕುರುಬೂರು ಶಾಂತಕುಮಾರ್

ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ ರೈತರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಮತ್ತು ತಪ್ಪು ಸಂದೇಶ ನೀಡಿದ್ದಾರೆ.ಮೊಸಳೆ ಕಣ್ಣೀರು ಸುರಿಸಿ ರೈರಿಗೆ ಮೋಸ ಮಾಡುತ್ತಿದ್ದಾರೆ. ರೈತರು ಭಿಕ್ಷುಕರಲ್ಲ. ದೇಶದ ರಕ್ಷಕರು. ಭಿಕ್ಷೆಯ ರೀತಿಯಲ್ಲಿ ಬರ ಪರಿಹಾರ ನೀಡಬೇಡಿ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಗನ್‍ಹೌಸ್ ಎದುರಿರುವ ರಾಜ್ಯ ಕಬ್ಬುಬೆಳೆಗಾರರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಬ್ಬು ಎಫ್‍ಆರ್‍ಪಿ ದರವನ್ನು 9.5 ಇಳುವರಿಗೆ 3000 ರು. ನಿಗದಿ ಮಾಡಬೇಕು. ರಾಜ್ಯದಲ್ಲಿ 3 ವರ್ಷಗಳಿಂದ ಸತತ ಬರಗಾಲಕ್ಕೆ ಒಳಗಾಗಿರುವ ಕಾರಣ ರೈತರ ಸಾಲ ಮನ್ನಾ ಮಾಡಬೇಕು. ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬೆಳಗಾವಿ ಅಧಿವೇಶನದ ಆರಂಭ ದಿನವಾದ ನ.21ರಂದು ಸುವರ್ಣ ಸೌಧಕ್ಕೆ ಸಾವಿರಾರು ರೈತರೊಂದಿಗೆ ಮುತ್ತಿಗೆ ಹಾಕಿ ಜಾಗಟೆ ಚಳುವಳಿ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಬರಗಾಲದ ಬೆಳೆ ನಷ್ಟ ಹಾಗೂ ನೀರಾವರಿ ಪ್ರದೇಶದ ಬೆಳೆ ನಷ್ಟ ಪರಿಹಾರ ವೈಜ್ಞಾನಿಕವಾಗಿ ಎಕರೆಗೆ ಕನಿಷ್ಠ 25 ಸಾವಿರ ರು. ಬರ ಪರಿಹಾರ ನೀಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ದಿನದಲ್ಲಿ ಕನಿಷ್ಠ 10 ಗಂಟೆಗಳ ಸಮರ್ಪಕ ವಿದ್ಯುತ್ ಪೂರೈಸಬೇಕು. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶ ಎಂಬ ತಾರತಮ್ಯ ಮಾಡಬಾರದು ಎಂದು ಅವರು ಆಗ್ರಹಿಸಿದರು.

ರೈತರನ್ನು ಸಾಯಿಸುವ ಅಧ್ಯಯನ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಹೋಗಿದ್ದಾರೆ. ಅವರು ರೈತರನ್ನು ಹೇಗೆ ಸಾಯಿಸಬಹುದು ಎಂದು ಅಧ್ಯಯನ ಮಾಡಲು ವಿದೇಶಕ್ಕೆ ತೆರಳಿದ್ದಾರೆ. ಹಳ್ಳಿಗಾಡಿನಲ್ಲಿ ವಾರಕ್ಕೆ 4 ದಿನ ವಿದ್ಯುತ್ ಕಡಿತ ಮಾಡುವುದಾಗಿ ಹೇಳಿದ್ದಾರೆ. ದಿನಕ್ಕೆ 8ರಿಂದ 10 ಗಂಟೆ ವಿದ್ಯುತ್ ನೀಡಲೇಬೇಕು ಎಂದರು.

Leave a Reply

comments

Related Articles

error: